ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತ ನಡೆದಿದ್ದು, ತಾಯಿಯೊಬ್ಬಳು ಮಗುವಿಗೆ ವಿಷ ಕುಡಿಸಿ ತಾನು ಸಹ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಒಂದು ವರ್ಷ ಎಂಟು ತಿಂಗಳ ಮಗು ಚಾರ್ವಿ ಸಾವನ್ನಪ್ಪಿದು, ತಾಯಿ ಚಂದ್ರಿಕಾ (26) ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಬೆಂಗಳೂರಿನ ಬ್ಯಾಡರಹಳ್ಳಿ ಠಾಣ ವ್ಯಾಪ್ತಿಯಲ್ಲಿ ತಿಗಳರಪಾಳ್ಯದಲ್ಲಿ ಒಂದು ಘಟನೆ ನಡೆದಿದೆ ಗಂಡ ಯೋಗೇಶ್ ಜೊತೆಗೆ ಗಲಾಟೆ ಹಿನ್ನೆಲೆಯಲ್ಲಿ ತಾಯಿ ಸಾಸಾಯುವ ಯೋ ನಿರ್ಧಾರ ತೆಗೆದುಕೊಂಡಿದ್ದಾಳೆ. ಹಾಗಾಗಿ ಟೀ ಗೆ ಇಲಿ ಪಾಷಾನ ಬೆರೆಸಿ ಮಗುವಿಗೆ ಕುಡಿಸಿ ತಾಯಿ ತಾನು ಕುಡಿದಿದ್ದಾಳೆ. ಗಂಡ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಚಂದ್ರಿಕಾ ಮಗು ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ನಂತರ ಚಂದ್ರಿಕಾ ವಿಷ ಸೇವಿಸಿರುವುದಾಗಿ ತನ್ನ ಗಂಡನಿಗೆ ಕರೆ ಮಾಡಿ ತಿಳಿಸಿದ್ದಾಳೆ. ಕೂಡಲೇ ಮನೆಗೆ ಬಂದು ಮಗು ಮತ್ತು ಪತ್ನಿಯನ್ನು ಪತಿ ಯೋಗೇಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಗು ಚಾರ್ವಿ ಸಾವನ್ನಪ್ಪಿದೆ. ಇನ್ನು ಚಂದ್ರಿಕಾಳಿಗೆ ಚಿಕಿತ್ಸೆ ಮುಂದುವರೆದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.