ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಪತಿಯ ಮನೆಯಲ್ಲಿ ಕಿರುಕುಳಕ್ಕೆ ಬೇಸತ್ತು ಪತ್ನಿ ತವರುಮನೆ ಸೇರಿದ್ದಾಳೆ. ಪತ್ನಿ ಹಾಗೂ ಆಕೆ ಕುಟುಂಬ ಸದಸ್ಯರರನ್ನು ಪತಿ ಕೊಲೆಗೆ ಯತ್ನಿಸಿದ್ದಾನೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪಾಪಿ ಪತಿ ಕೊಲೆಗೆ ಯತ್ನಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಒಂದು ಘಟನೆ ನಡೆದಿದ್ದು, ಡಿಸೆಂಬರ್ 10 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಲಿಹಡಲಗಿ ಗ್ರಾಮದ ಭೀಮಪ್ಪ ಭೋಸಲೇ ಕಿರುಕುಳಕ್ಕೆ ಬೇಸತ್ತು ಪತ್ನಿ ರಾಣಿ ತವರುಮನೆಗೆ ಬಂದಿದ್ದಳು ಬೇಡ ಅಂದರೂ ಕೂಡ ಪತ್ನಿಯನ್ನು ತವರುಮನೆಗೆ ಹೋಗಿದ್ದಾರೆ ಎಂದು ಭೀಮಪ್ಪ ಸಿಟ್ಟು ಮಾಡಿಕೊಂಡಿದ್ದು, ಮನೆಯಲ್ಲಿದ್ದ ಆರು ಜನರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಎತ್ನಿಸಿದ್ದಾನೆ ಸಂಜು ಸಾಲುಂಕೆ, ಶಂಕರ್, ಕೃಷ್ಣ ಸಾಲುಂಕೆ, ಅಂಕುಶ್ ಪಡತಾರೆ ಹಾಗೂ ಮನೋಹರ್ ಪಡತ್ತಾರೆ ಪತ್ನಿ ರಾಣಿ ಭೋಸಲೆಗೆ ಗಂಭೀರವಾದ ಗಾಯಗಳಾಗಿದೆ. ವಿಜಯಪುರದ ಬಿ ಎಲ್ ಡಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.








