ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಶಾಲೆಗೆ ತೆರಳುತ್ತಿದ್ದ ಬಾಲಕಿಯ ಮೇಲೆ ಚಾಲಕನ ನಿರ್ಲಕ್ಷದಿಂದ ಬಸ್ ಹರಿದು, ಸ್ವಲ್ಪದರಲ್ಲೇ 13 ವರ್ಷದ ಬಾಲಕಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇದೀಗ ವರದಿಯಾಗಿದೆ.
ಶಾಲಾ ಬಾಲಕಿ ಸೈಕಲ್ ಮೇಲೆ ತೆರಳುವಾಗ ಖಾಸಗಿ ಬಸ್ ವಿದ್ಯಾರ್ಥಿನಿಯ ಮೇಲೆ ಹರಿದಿದೆ. ಸಾವಿನ ಮನೆ ಕದ ತಟ್ಟಿ ವಾಪಸ್ ಬಂದ 13 ವರ್ಷದ ಬಾಲಕಿ, ಬೆಳಗಾವಿ ಜಿಲ್ಲೆಯ ಗೋಕಾಕ್ನ ಮಲ್ಲಾಪುರ ಪಿಜಿ ಬಳಿ ಇ ಒಂದು ಘಟನೆ ಸಂಭವಿಸಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಸ್ ಗುದ್ದಿದ ಬಳಿಕ ಬಾಲಕಿ ಬಸ್ ಕೆಳಗೆ ಇದ್ದಾಳೆ ಆದರೆ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ








