ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ ಘಟನೆ ನಡೆದಿದ್ದು, ಪಿಜಿಯಲ್ಲಿ ನೇಣು ಬಿಗಿದುಕೊಂಡು ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಬೆಂಗಳೂರಿನ ಬಾಗಲೂರಿನ ಪಿಜಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸನಾ ಪರ್ವೀನ್ ಎನ್ನುವ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಸನಾ ಸಾವಿಗೆ ಆಕೆ ಓದುತ್ತಿದ್ದ ಕಾಲೇಜಿನ ಪಾಸ್ ಔಟ್ ವಿದ್ಯಾರ್ಥಿ ಕಾರಣ ಎಂದು ಹೇಳಲಾಗುತ್ತಿದೆ. ಮೃತ ಸಾನಾ ಕುಟುಂಬದವರಿಂದ ರಿಫಾಸ್ ಎನ್ನುವ ವಿದ್ಯಾರ್ಥಿಯ ವಿರುದ್ಧ ಆರೋಪ ಕೇಳಿ ಬಂದಿದೆ. ಸನಾ ಪರ್ವೀನ್ ಓದುತ್ತಿದ್ದ ಕಾಲೇಜಿನಲ್ಲಿ ರಿಫಾಸ್ ಸಹ ಓದುತ್ತಿದ್ದ. ಈತ ಪಾಸ್ ಔಟ್ ಆಗಿದ್ದರು ಸನಾಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ.
ರಿಫಾಸ್ ಮೂಲತಃ ಕೇರಳ ವಿದ್ಯಾರ್ಥಿಯಾಗಿದ್ದು ಕಳೆದ 10 ತಿಂಗಳ ಹಿಂದೆ ಪರ್ವೀನ್ ಗೆ ಸಾಕಷ್ಟು ಕಿರುಕುಳ ನೀಡಿದ್ದಾನೆ. ಪಾಸ್ ಔಟ್ ಆದ ನಂತರ ಕೂಡ ಈಕೆ ಓದುತ್ತಿದ್ದ ಕಾಲೇಜಿಗೆ ಬರೋದು ಹೋಗೋದು ಮಾಡುತ್ತಿದ್ದ. ಪಿಜಿ ಬಳಿಗೆ ಬಂದು ಸಾಕಷ್ಟು ಹಿಂಸೆ ಕೊಡುತ್ತಿದ್ದ ಎಂದು ಸ್ನೇಹಿತರು ಹೇಳಿದ್ದಾರೆ. ಈ ಸಂಬಂಧ ಕಾಲೇಜಿನಲ್ಲಿ ಕೆಲವು ಘಟನೆಗಳು ನಡೆದಿದ್ದು, ಪಾಸ್ ಔಟ್ ಬಳಿಕವೂ ರಿಫಾಸ್ ಕಾಲೇಜು ಬಂದು ಪರ್ವೀನ್ ಗೆ ಕಿರುಕುಳ ನೀಡುತ್ತಿದ್ದ. ಈ ಕುರಿತು ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.