ಬೆಂಗಳೂರು : ಬೆಂಗಳೂರಿನಲ್ಲಿ ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾಗಿರುವ ಘಟನೆ ವರದಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಯಶಸ್ವಿನಿ (23) ನೇಣಿಗೆ ಶರಣಾಗಿದ್ದಾಳೆ
ಪರಿಮಳ ಹಾಗು ಭೂದೇವಯ್ಯ ದಂಪತಿಯ ಏಕೈಕ ಪುತ್ರಿಯಾಗಿರುವ ಯಶಸ್ವಿನಿ ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಶರಣಾಗಿದ್ದಾಳೆ. ಬೊಮ್ಮನಹಳ್ಳಿಯ ಆಕ್ಸ್ಫರ್ಡ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಯಶಸ್ವಿನಿ ಒರಲ್ ಮೆಡಿಸಿನ್ ಅಂಡ್ ರೇಡಿಯೋಲೋಜಿ ವಿಭಾಗದಲ್ಲಿ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿ ಓದುತ್ತಿದ್ದಳು. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ವಿನಿಗೆ ಕಾಲೇಜಿನಲ್ಲಿ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ಯಶಸ್ವಿನಿಗೆ ಅವಕಾಶ ನೀಡದೆ ಟಾರ್ಚರ್ ನೀಡಿದ್ದಾರೆ. ಕಣ್ಣು ನೋವಾಗಿದ್ದರಿಂದ ಯಶಸ್ವಿನಿ ಬುಧವಾರ ಕಾಲೇಜಿಗೆ ರಜೆ ಹಾಕಿದ್ದಳು.ಗುರುವಾರ ಕಾಲೇಜಿಗೆ ಹೋದಾಗ ವಿದ್ಯಾರ್ಥಿಗಳ ಮುಂದೆ ಆಕೆಗೆ ಅವಮಾನ ಮಾಡಲಾಗಿದೆ. ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ ಎಷ್ಟು ಹಣೆ ಹಾಕಿಕೊಂಡೆ ಎಂದು ಪ್ರಶ್ನಿಸಿದ್ದಾರೆ.ಇಡೀ ಬಾಟಲಿ ಸುರಿದುಕೊಂಡ ಎಂದು ಉಪನ್ಯಾಸಕ ಅವಮಾನಿಸಿದ್ದಾರೆ. ಉಪನ್ಯಾಸಕ ಮತ್ತು ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಪರಿಮಳ ಆರೋಪಿಸಿದ್ದಾರೆ.
ಕಿರುಕುಳ ಕೊಟ್ಟ ಪ್ರಿನ್ಸಿಪಾಲ್ ಮತ್ತು ಅವಮಾನಿಸಿದ ಲೆಕ್ಚರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಆಕ್ಸ್ಫರ್ಡ್ ಡೆಂಟಲ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಅಗ್ರಹಿಸಲಾಗಿದೆ. ಶವಾಗಾರದ ಮುಂದೆ ಯಶಸ್ವಿನಿ ಪೋಷಕರ ಜೊತೆಗೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.








