ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ನಡೆದಿತ್ತು. ಚಿಟ್ ಫಂಡ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಎಸಗಿಲಾಗಿದ್ದು, ನವಶಕ್ತಿ ಚಿಟ್ ಫಂಡ್ ಅಧ್ಯಕ್ಷ ಶರವಣ ಎಂಬ ಆರೋಪಿಯನ್ನು ಇದೀಗ ಸಿಐಡಿ ಅರೆಸ್ಟ್ ಮಾಡಿದೆ.
ಆರೋಪಿ ಶರವಣ ನೂರಾರು ಜನರ ಬಳಿ ಲಕ್ಷಾಂತರ ಹಣ ಪಡೆದು, ಕೋಟ್ಯಾಂತರ ರೂಪಾಯಿ ವಂಚನೆ ಎಸಗಿದ್ದ. ವಂಚನೆ ಮಾಡಿ ಆರೋಪಿ ಶರವಣ ತಲೆಮರಿಸಿಕೊಂಡಿದ್ದ ರಾಜಾಜಿನಗರ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಬಳಿಕ ವಂಚನೆಗೆ ಸಿಐಡಿ ಗೆ ವರ್ಗಾವಣೆಯಾಗಿತ್ತು.
ನೂರಾರು ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಆರೋಪಿ ಶರವಣ ವಂಚನೆ ಎಸಗಿದ್ದಾನೆ. ಇದೀಗ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.ನವಶಕ್ತಿ ಚಿಟ್ ಫಂಡ್ ಅಧ್ಯಕ್ಷ ಶರವಣ, ಉಪಾಧ್ಯಕ್ಷ ರಾಘವೇಂದ್ರ ಹಾಗು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. 300ಕ್ಕೂ ಹೆಚ್ಚು ಜನರಿಗೆ ವಂಚನೆ ಆರೋಪ ಕೇಳಿ ಬಂದಿತ್ತು. ಸದ್ಯ ಆರೋಪಿ ಶರವಣನನ್ನು ಸಿಐಡಿ ಬಂಧಿಸಿ ವಿಚಾರಣೆ ಮಾಡುತ್ತಿದೆ.