ಕಲಬುರ್ಗಿ : ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಸುರಿದು ಒಂದು ಇಡಿ ಕುಟುಂಬವನ್ನು ಸಾಮೂಹಿಕ ಹತ್ಯೆಗೆ ಯತ್ನಿಸಿರುವ ಘಟನೆ ಕಲ್ಬುರ್ಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಕುಟುಂಬದ ಸುಮಾರು 6 ಜನರು ಕಲಬುರ್ಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು 4 ಜಮೀನು ವ್ಯಾಜ್ಯವಾಗಿ ಸಾಮೂಹಿಕ ಹತ್ಯೆಗೆ ಯತ್ನಿಸಲಾಗಿದೆ. ಶಿವಲಿಂಗಪ್ಪ ಕರಿಕಲ್ ಎಂಬಾತನಿಂದ ಗುಂಡೆರಾವ್ ಎನ್ನುವವರ ಕುಟುಂಬದ ಹತ್ಯೆಗೆ ಯತ್ನಿಸಲಾಗಿದೆ. ಬಟ್ಟೆಯ ಉಂಡೆಗಳನ್ನು ಪೆಟ್ರೋಲ್ ನಲ್ಲಿ ತೊಯಿಸಿ ಮನೆಗೆ ನುಗ್ಗಿ ಕೀಟನಾಶಕದ ಸ್ಪ್ರೇಯಿಂದ ಪೆಟ್ರೋಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಾನೆ. ಸಾಮೂಹಿಕ ಸಾಯಿಸಬೇಕು ಎಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಈ ಒಂದು ಘಟನೆ ನಡೆದಿದೆ.
ಶಿವಲಿಂಗಪ್ಪ ಎಂಬಾತ ಗುಂಡೆರಾವ್ ಎನ್ನುವವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಯತ್ನ ಮಾಡಿದ್ದಾರೆ. ಗ್ರಾಮಸ್ಥರ ಒಂದು ಜಾಗೃತೆಯಿಂದ ಇಡಿ ಕುಟುಂಬ ಇದೀಗ ಪ್ರಾಣಾಪಾಯದಿಂದ ಪಾರಾಗಿದೆ. ಶಿವಲಿಂಗಪ್ಪ 4 ಎಕರೆ ಜಮೀನು ಗುಂಡೂರಾವ್ ಗೆ ಮಾರಾಟ ಮಾಡಿದ್ದ. ಖರೀದಿ ಮಾತುಕತೆಯಾಗಿ ಶಿವಲಿಂಗಪ್ಪ 13 ಲಕ್ಷ ಅಡ್ವಾನ್ಸ್ ಪಡೆದಿದ್ದ. ಬಳಿಕ ಜಮೀನು ರಿಜಿಸ್ಟರ್ ಮಾಡಿಕೊಡುವ ವಿಚಾರದಲ್ಲಿ ವಿವಾದ ನಡೆದಿದೆ.ಜಮೀನು ರಿಜಿಸ್ಟರ್ ಮಾಡಿಕೊಡಲು ಶಿವಲಿಂಗಪ್ಪ ವಿರೋಧ ಮಾಡುತ್ತಿದ್ದ ಎನ್ನಲಾಗಿದೆ.