ಹಾಸನ : ಪ್ರಿಯಕರನೊಬ್ಬ ತನ್ನ ಪ್ರಿಯತಮೆಯ ಕಾಟಕ್ಕೆ ಬೇಸತ್ತು, ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ವಿಷ ಸೇವಿಸಿದ ತಕ್ಷಣ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಯುವಕ ಇದೀಗ ಸಾವನಪ್ಪಿದ್ದಾನೆ.
ಕಳೆದ ಡಿಸೆಂಬರ್ 26ರಂದು ಯುವಕ ವಿಷ ಸೇವಿಸಿದ್ದ ತಕ್ಷಣ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.ಪ್ರಿಯತಮೆಯ ಕಾಟಕ್ಕೆ ಬೇಸತ್ತು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೂಸೈಡ್ ಮಾಡಿಕೊಂಡ ಯುವಕನನ್ನು ಕವನ ಎಂದು ತಿಳಿದುಬಂದಿದೆ. ಸಕಲೇಶಪುರ ತಾಲೂಕಿನ ಮಾಳೆಗದ್ದೆಯಲ್ಲಿ ಈ ಒಂದು ಘಟನೆ ನಡೆದಿದ್ದು, ನನ್ನ ಸಾವಿಗೆ ಅಂಜಲಿ ಎಂಬ ಯುವತಿ ಕಾರಣ ವಿಡಿಯೋದಲ್ಲಿ ಯುವಕ ಆರೋಪಿಸಿದ್ದಾನೆ.
2021 ರಲ್ಲಿ ನನ್ನ ಮನೆಯ ಬಳಿ ಅಂಜಲಿ ವಾಸಿಸುತ್ತಿದ್ದಳು.ಆಗ ನನ್ನ ಲೈಫ್ ನಲ್ಲಿ ಅವಳು ಬಂದು ಇಬ್ಬರು ಪರಸ್ಪರ ಪ್ರೀತಿಸುತಿದ್ದೆವು. ನೀನು ನನಗೆ ಬೇಕೇ ಬೇಕು ಅಂತ ಹಠ ಹಿಡಿದಿದ್ದಳು. ಅನಂತರ ಅವಳ ನಡವಳಿಕೆ ಕಂಡು ನಾನು ದೂರವಾದೆ. 2024ರಲ್ಲಿ ನನ್ನ ವಿರುದ್ಧ ಪೊಲೀಸರಿಗೆ ಆಕೆ ದೂರು ನೀಡಿದ್ದಾಳೆ, ಹುಡುಗಿಯರು ಏನೇ ಮಾಡಿದರು ಲೆಕ್ಕಕ್ಕೆ ಬರುವುದಿಲ್ಲ ಎಂದು ಯುವತಿಯ ವಿರುದ್ಧ ಆರೋಪಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಘಟನೆ ಕುರಿತು ಸಕಲೇಶಪುರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.