ರಾಯಚೂರು : ಹೋಳಿ ಹಬ್ಬ ಆಚರಣೆ ಬಳಿಕ ಸ್ನಾನಕ್ಕೆಂದು ಕೆರೆಗೆ ತೆರಳಿ ನಾಪತ್ತೆಯಾಗಿದ್ದ ಇಬ್ಬರು ಶವವಾಗಿ ಪತ್ತೆಯಾಗಿರುವ ಪ್ರತ್ಯೇಕ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮೊದಲನೇ ಘಟನೆ ರಾಯಚೂರು ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮೊದಲನೇ ಘಟನೆ ಸುಲ್ತಾನಪುರ ಗ್ರಾಮದಲ್ಲಿ ನಡೆದಿದ್ದು, ಸ್ನಾನಕ್ಕೆಂದು ಹೊಂಡಕ್ಕೆ ಜಿಗಿದ ಓರ್ವ ವ್ಯಕ್ತಿ ನೀರು ಪಾಲಾಗಿದ್ದರು. ನಾಪತ್ತೆಯಾಗಿದ್ದವರನ್ನು ಜಾಗೀರವೆಂಕಟಾಪುರ ಗ್ರಾಮದ ಸೋಮನಗೌಡ (45) ಎಂದು ತಿಳಿಯಲಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ಇನ್ನೂ ರಾಯಚೂರು ತಾಲೂಕಿನ ಆರ್‌ಡಿಎಸ್ ಕಾಲುವೆಗೆ ಸ್ನಾನಕ್ಕೆಂದು ಹೋಗಿದ್ದ ಯರಗೇರಾ ಗ್ರಾಮದ ಮಹಾದೇವ (30) ನಾಪತ್ತೆಯಾಗಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿತ್ತು.ಶನಿವಾರ ಬೆಳಿಗ್ಗೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ