ರಾಮನಗರ : ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಮಾಹಿತಿ ತಿಳಿದು ದಾಳಿ ನಡೆಸಿದ ತಹಸೀಲ್ದಾರ್ ಅವರ ಮೇಲೆಯೇ ಚಾಲಕನೊಬ್ಬ ಲಾರಿ ಹರಿಸಲು ಯತ್ನಿಸಿದ ಪ್ರಸಂಗ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಭೀಮಸಂದ್ರ ಬಳಿ ನಡೆದಿದ್ದು, ಇದೀಗ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ.
ಹಾರೋಹಳ್ಳಿಯ ಭೀಮಸಂದ್ರ ಬಳಿ ಗುರುವಾರ ಈ ಘಟನೆ ನಡೆದಿದ್ದು, ಶನಿವಾರ ಪ್ರಕರಣ ದಾಖಲಾಗಿದೆ. ತಹಸೀಲ್ದಾರ್ ವಿಜಿಯಣ್ಣ ಸ್ವಲ್ಪದರಲ್ಲಿಯೇ ಬಚಾವಾಗಿದ್ದಾರೆ. ಸರಕಾರಿ ಕೆಲಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ಭೀಮಸಂದ್ರ ಬಳಿಯ ಗೋಮಾಳದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಸ್ಥಳಕ್ಕೆ ತಹಸೀಲ್ದಾರ್ ತೆರಳಿದ್ದಾರೆ.
ಉದ್ಯೋಗವಾರ್ತೆ: ‘BMTC’ಯ ‘2,500 ಖಾಲಿ ಹುದ್ದೆ’ಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ!
ಈ ವೇಳೆ ಸ್ಥಳದಿಂದ ಹೊರಟಿದ್ದ ಲಾರಿ ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಸೂಚನೆ ಧಿಕ್ಕರಿಸಿ ತಹಸೀಲ್ದಾರ್ ಇರುವ ಕಡೆಯೇ ನುಗ್ಗಿಸಲು ಯತ್ನಿಸಿದ್ದಾನೆ. ಘಟನೆ ಸಂಬಂಧ ಹಾರೋಹಳ್ಳಿ ಠಾಣೆಯಲ್ಲಿ ತಹಸೀಲ್ದಾರ್ ವಿಜಿಯಣ್ಣ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
‘ಕೋವಿಡ್’ ಲಸಿಕೆಯಿಂದ ‘ಹೃದಯಾಘಾತ’ ಸುಳ್ಳು : ಕೇಂದ್ರ ಸ್ಪಷ್ಟನೆ | ‘Heart attack’ from ‘Covid’ vaccine lie