ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಕ್ರಮಕೈಗೊಳ್ಳದ ಬಿಬಿಎಂಪಿ, ಪೊಲೀಸ್ ಇಲಾಖೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಪೊಲೀಸ್ ಆಯುಕ್ತಾರಾದ ಬಿ. ದಯಾನಂದ ಅವರು ಬಿಬಿಎಂಪಿ ಆಯುಕ್ತರ ಜೊತೆ ಸಭೆ ನಡೆಸಿದ್ದು ಅಕ್ರಮ ಫ್ಲೆಕ್ಸ್ ಬ್ಯಾನರ್ ಗಳು ಸಂಪೂರ್ಣ ಬ್ಯಾನ್ ಮಾಡಲಾಗಿದೆ ಎಂದರು.
ಫ್ಲೆಕ್ಸ್ಗಳನ್ನು ಹಾಕದಂತೆ ಹಾಗೂ ತೆರವಿನ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಜೊತೆ ಪೊಲೀಸ್ ಕಮಿಷನರ್ ಸಭೆ ನಡೆಸಲಾಗಿದ್ದು, ಸಭೆ ಬಳಿಕ ಮಾತನಾಡಿದ ಕಮಿಷನರ್, ಫ್ಲೆಕ್ಸ್, ಬ್ಯಾನರ್ಗಳ ಅಳವಡಿಕೆ ವಿರುದ್ಧ ಯಾವ ರೀತಿ ಕಾರ್ಯಾಚರಣೆ ಮಾಡಬೇಕೆಂಬ ನಿರ್ಧಾರ ಮಾಡಲಾಗಿದೆ. ಅಕ್ರಮ ಚಟುವಟಿಕೆಗಳ ಮಟ್ಟಹಾಕಲು ಚರ್ಚೆ ಮಾಡಲಾಗಿದೆ ಎಂದರು.
ಫ್ಲೆಕ್ಸ್ ಹಾಕುವ ವೇಳೆ ಅದನ್ನು ಪೂರ್ವ ನಿರ್ಧರಿತ ನಂಬರ್ಗೆ ಮಾಹಿತಿ ನೀಡುವುದು. ಅವುಗಳ ಮೇಲೆ ಎಫೆಕ್ಟಿವ್ ಆಕ್ಷನ್ ಬಗ್ಗೆ ಚರ್ಚೆ ಮಾಡಲಾಗಿದೆ. ಇನ್ನು ಪೊಲೀಸರಿಗೆ ಬಿಬಿಎಂಪಿಯವರು ನೀಡಿರುವ ನಂಬರ್ಗೆ ಮಾಹಿತಿ ನೀಡಲಾಗುತ್ತದೆ.ಈ ವೇಳೆ ಬಿಬಿಎಂಪಿಯಿಂದ ಅವುಗಳು ಅಧಿಕೃತವೋ ಅಥವಾ ಅನಧಿಕೃತವೋ ಎಂದು ಪರಿಶೀಲಿಸಲಾಗುತ್ತದೆ. ನಂತರ ಬಿಬಿಎಂಪಿಯಿಂದ ಈ ಬಗ್ಗೆ ದೂರು ನೀಡಲಾಗುತ್ತೆ. ನಂತರ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಅನಧೀಕೃತ ಬ್ಯಾನರ್ಗಳ ತೆರವಿಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಚರಣೆ ನಡೆಸಲಿದ್ದು, ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್ಗಳನ್ನು ಪೊಲೀಸರು ತೆರೆವುಗೊಳಿಸಲಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಲಿದ್ದು, ದೂರು ಬಂದ ತಕ್ಷಣವೇ ಪೊಲೀಸರು, ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್ ತೆರವು ಕಾರ್ಯ ನಡೆಸಲಿದ್ದಾರೆ.