ಧಾರವಾಡ : ಇತ್ತೀಚಿಗೆ ರಾಜ್ಯದಲ್ಲಿ ಆನ್ಲೈನ್ ಗೇಮ್ ನಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.ಇದೀಗ ಆನ್ಲೈನ್ ಗೆ ನಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ ಇದರಿಂದ ಮನನೊಂದ ಯುವಕ ನೀಡೋ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಹೌದು ನಾಗರಾಜ್ ಶಿವಪ್ಪ ಉಳವಣ್ಣವರ(30) ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆನ್ ಲೈನ್ ಗೇಮ್ ಚಟದಿಂದ ನೇಣಿಗೆ ಶರಣಾದ ಶಂಕೆ ವ್ಯಕ್ತವಾಗಿದೆ. ಮೃತ ನಾಗರಾಜ್ ಅನ್ ಲೈನ್ ಗೇಮ್ ನಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಕಳೆದುಕೊಂಡಿದ್ದು, ತೀವ್ರ ನಷ್ಟಕ್ಕೊಳಗಾಗಿದ್ದ. ಅಲ್ಲದೇ ಈತ ಐಐಟಿ ಸ್ಟಾಫ್ ನರ್ಸ್ ಎಂದು ತಿಳಿದುಬಂದಿದೆ.ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.