ಬೆಂಗಳೂರು : ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಆಗಲಿ ಎಂದು ನಾನು ಹಾರೈಸುತ್ತೇನೆ. ಸಿದ್ದರಾಮಯ್ಯ ದಾಖಲೆ ಮಾಡಲಿ ಅಂತ ಕೂಡ ಹಾರೈಸುತ್ತೇನೆ ಐದು ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ದಾಖಲೆ ಆಗುತ್ತದೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆಯ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಜಿ ಪರಮೇಶ್ವರ್, ಶಾಸಕರು ಸಿದ್ದರಾಮಯ್ಯ ಅವರನ್ನು CLP ನಾಯಕರಾಗಿ ಆಯ್ಕೆ ಮಾಡಿದ್ದರು. ಆಗ ಹೈಕಮಾಂಡ್ ಎರಡೂವರೆ ವರ್ಷ ಅಧಿಕಾರ ಅಂತ ಏನು ಹೇಳಿಲ್ಲ. ನಾವೆಲ್ಲ ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದೆ ಭಾವಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆಯ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಸುಗ್ರೀವಾಜ್ಞೆ ಜಾರಿಗೆ ರಾಜಪಾಲರು ಅಂಕಿತ ಹಾಕಿದ ವಿಚಾರವಾಗಿ ನಾವು ಮೊದಲು ಸುಗ್ರೀವಾಜ್ಞೆ ಕಳಿಸಿದಾಗ ರಾಜ್ಯಪಾಲರು ಕೆಲವು ಪ್ರಶ್ನೆಗಳನ್ನು ಕೇಳಿದರು.ಸರಕಾರ ರಾಜ್ಯಪಾಲರ ಪ್ರಶ್ನೆಗೆ ಉತ್ತರ ಕಳುಹಿಸಿತ್ತು. ಅದನ್ನೆಲ್ಲ ಪರಿಶೀಲಿಸಿ ರಾಜಪಾಲರು ಇದೀಗ ಸುಗ್ರೀವಾಜ್ಞೆ ಜಾರಿಗೆ ಒಪ್ಪಿಗೆ ಕೊಟ್ಟಿದ್ದಾರೆ.ತಕ್ಷಣ ಸುಗ್ರೀವಾಜ್ಞೆ ಜಾರಿಗೆ ಬಂದಿದೆ. ಕಿರುಕುಳ ಮನೆಗೆ ಬೇಗ ಹಾಕುವ ಪ್ರಕರಣಗಳು ರಾಜ್ಯದ ಹಲವಡೆ ನಡೆಯುತ್ತಿತ್ತು. ಆತ್ಮಹತ್ಯೆಗಳು ಹಾಗೂ ಊರು ಬಿಟ್ಟು ಹೋಗುವ ಘಟನೆಗಳು ಕೂಡ ನಡೆಯುತ್ತಿದ್ದವು. ಇದಕ್ಕೆಲ್ಲಾ ಕಡಿವಾಣ ಹಾಕಲು ಸುಗ್ರೀವಾಜ್ಞೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಇನ್ನು ಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ತೀರ್ಮಾನ ಏನೇ ಇದ್ದರೂ ನಾವು ಒಪ್ಪಿಕೊಳ್ಳುತ್ತೇವೆ. ಕಚೇರಿ ಉದ್ಘಾಟನೆಯ ವೇಳೆ ಎಐಸಿಐ ಅಧ್ಯಕ್ಷರು ಈ ಕುರಿತು ಮಾತನಾಡಿದ್ದು ಭಾರತದಲ್ಲಿ ಖರ್ಗೆ ಹೇಳಿರಬಹುದು ಎಂದು ತಿಳಿಸಿದರು ಕೆಲವು ರಾಜ್ಯಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತಿದೆ ಪಕ್ಷ ಸಂಘಟನೆ ದೃಷ್ಟಿಯಿಂದ ಖರ್ಗೆಯವರು ಹಾಗೆ ಹೇಳಿರಬಹುದು ಹೈಕಮಾಂಡ್ ತಿರುಮಲ ಏನಿರುತ್ತೋ ಗೊತ್ತಿಲ್ಲ ಎಂದು ಜಿ ಪರಮೇಶ್ವರ್ ತಿಳಿಸಿದರು.