ಮಂಡ್ಯ : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇತ್ತೀಚಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಮತ್ತೆ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು ಇದೀಗ ಕೆ ಆರ್ ಪಿ ಪಿ ಪಕ್ಷದ ನಾಯಕ ಜನಾರ್ದನ್ ರೆಡ್ಡಿ ಕೂಡ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗುವುದಾದರೆ ಬಿಜೆಪಿಗೆ ಬೆಂಬಲಿಸುತ್ತೇನೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇಡೀ ದೇಶ ಪ್ರಧಾನಮಂತ್ರಿ ಮೋದಿಜಿ ಅವರು ಮತ್ತೊಮ್ಮೆ ಆಗಬೇಕೆಂಬುದು ಜನರ ಅಭಿಪ್ರಾಯವಿದೆ ಎಂದು ತಿಳಿಸಿದರು.
ಈ ವಿಚಾರದಲ್ಲಿ ದೇಶಕ್ಕೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಬಿಟ್ರೆ ಅವರ ವಿರುದ್ಧ ತಮಗೆ ಬೇರೆ ಯಾರು ಅಭ್ಯರ್ಥಿ ಎದುರಾಳಿಯಾಗಿ ಇಲ್ಲ ಎಂದು ತಿಳಿದಿದೆ. ಹಾಗಾಗಿ ನಾನು ಬಿಜೆಪಿ ಪಕ್ಷ ಮುಂದಾದಲ್ಲೇ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಿದ್ಧವಾಗಿದೆ. ಇಲ್ಲವಾದರೆ ಕೆ.ಆರ್.ಪಿ ತನ್ನ ಸ್ವಂತ ಬಲದಲ್ಲಿ ನಾಲ್ಕು ಸ್ಥಾನಗಳನ್ನು ಪಾರ್ಲಿಮೆಂಟ್ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.
ಮರಳಿ ಬಿಜೆಪಿ ಪಕ್ಷಕ್ಕೆ ಆಗಮಿಸುವ ಕುರಿತು ಯಡಿಯೂರಪ್ಪ ಅವರ ಜೊತೆ ಚರ್ಚೆ ಹಾಗೂ ಸಂಪರ್ಕದ ವಿಚಾರವಾಗಿ ಮಾತನಾಡಿದ ಅವರು, ಚರ್ಚೆ ಸಂಪರ್ಕ ಎನ್ನುವುದು ಈ ವಿಷಯದ ಕುರಿತಾಗಿ ನಾನು ಮಾತನಾಡುವುದಿಲ್ಲ ಕಾರಣ ಏನೆಂದರೆ ದೇಶದ ಹಿತದೃಷ್ಟಿಯಿಂದ ಮೋದಿಜಿ ಅವರ ಪರವಾಗಿ ನಾನು ಅವರಿಗೆ ಬೆಂಬಲ ಕೊಡುವುದಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪರವಾಗಿ ಬಿಜೆಪಿ ಪಕ್ಷ ಮುಂದೆ ಬಂದರೆ ಹೊಂದಾಣಿಕೆ ಮಾಡಿಕೊಳ್ಳುವಂತ ಕೆಲಸ ಮಾಡಿಕೊಳ್ಳುತ್ತೇವೆ ಎಂದರೂ.
ಆದರೆ ಅಂತಹ ಒಂದು ಸಂದರ್ಭ ಬಂದೇ ಇಲ್ಲ.ಬಂದಿದ್ದೆ ಆದರೆ ಈ ಕುರಿತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಈಗಾಗಲೇ ಅವರವರ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿ 5 ರಂದು ಕೆ ಆರ್ ಪಿ ಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇನೆ ಎಂದು ತಿಳಿಸಿದರು.