ಬೆಂಗಳೂರು : ಹೂಡಿಕೆ ಮತ್ತು ಕಾನೂನು ಸುವ್ಯವಸ್ಥೆಯನ್ನು ನಾವು ಕಾಪಾಡಬೇಕು. ಹೂಡಿಕೆ ಕಾನೂನು ಸುವ್ಯವಸ್ಥೆ ಇವೆರಡಕ್ಕೂ ಸಂಬಂಧವಿದೆ. ಹೂಡಿಕೆ, ಕಾನೂನು ಸುವ್ಯವಸ್ಥೆ ಬಗ್ಗೆ ಶೀಘ್ರದಲ್ಲಿ ಸಭೆ ಕರೆಯುವೆ. ವಿದ್ಯುತ್, ಬಿ-ಖಾತಾ ಇ-ಖಾತಾ ಬಗ್ಗೆ ಸಭೆ ಕರೆಯುತ್ತೇನೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವು ರಾಜ್ಯಗಳಲ್ಲಿ MSME ಇಲಾಖೆ ಪ್ರತ್ಯೇಕವಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ MSME ಪ್ರತ್ಯೇಕ ಇಲಾಖೆ ಮಾಡುವೆ. MSME ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳು. MSME ಪ್ರತ್ಯೇಕ ಸಚಿವರು ಹಾಗು ಅಧಿಕಾರ ವರ್ಗವನ್ನು ಮಾಡುತ್ತೇವೆ. ಎರಡು ಎಕರೆ ಲೀಸ್ ಕಮ್ ಸೇಲ್ ಮಾಡಿಕೊಟ್ಟವರು ಯಾರು? ರಾಜ್ಯದ ಅಭಿವೃದ್ಧಿ ಕೈಗಾರಿಕೆ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಿಂದೆ ನಡೆದು ಬಂದ ಹಾದಿ ಮುಂದೇನು ಮಾಡಬೇಕೆನ್ನುವ ಗುರಿ ಇಟ್ಟುಕೊಂಡು ಮುಂದೆ ನಡೆಯಿರಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.