ಬೆಂಗಳೂರು : ಬಿಡದಿಯಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಣಿಪಾಲ್ ಆಸ್ಪತ್ರೆಯಲ್ಲಿ ಪೊಲೀಸರು ರಿಕ್ಕಿ ರೈ ಹೇಳಿಕೆಯನ್ನು ಪಡೆದಿದ್ದಾರೆ. ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ಅವರು ರಿಕ್ಕಿ ರೈ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ರಿಕ್ಕಿ ರೈ ಸಂಪೂರ್ಣವಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಯಾರ ಮೇಲೆ ಅವಮಾನವಿದೆ ಅಂತಲೂ ಕೂಡ ರಿಕ್ಕಿ ರೈ ಹೇಳಿದ್ದಾರೆ ಎಫ್ ಐ ಆರ್ ನಲ್ಲಿ ಉಲ್ಲೇಖಿಸಿರುವ ಆರೋಪಿಗಳೆ ಅಟ್ಯಾಕ್ ಮಾಡಿಸಿದ್ದಾಗಿ ರಿಕ್ಕಿ ರೈ ಹೇಳಿದ್ದಾರೆ. ರಾಕೇಶ್ ಮಲ್ಲಿ, ಅನುರಾಧ, ನಿತೀಶ್, ವೈದ್ಯನಾಥನ್ ಹೆಸರು ಪ್ರಸ್ತಾಪಿಸಿದ್ದಾರೆ ಆಸ್ತಿ ವಿಚಾರವಾಗಿ ಗುಂಡಿನ ದಾಳಿ ನಡೆಸಿರುವುದಾಗಿ ರಿಕ್ಕಿ ರೈ ಆರೋಪಿಸಿದ್ದಾರೆ.
ನಾನು ರಷ್ಯಾದಲ್ಲಿದ್ದೆ. ಜಮೀನು ವಿವಾದ ಸಂಬಂಧ ನ್ಯಾಯಾಲಯದಲ್ಲಿ ಕೇಸ್ ಇತ್ತು. ಹೀಗಾಗಿ ನಾನು ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದೆ. ನಾನು ಬೆಂಗಳೂರಿಗೆ ಬಂದಾಗ ಸದಾಶಿವ ನಗರ ಮತ್ತು ಬಿಡದಿಯಲ್ಲಿ ಇರುತ್ತೇನೆ. ಬಿಡದಿಯಿಂದ ಸದಾಶಿವ ನಗರಕ್ಕೆ ಹೋಗುವಾಗ ಗುಂಡಿನ ದಾಳಿ ನಡೆದಿದೆ ಗಾಯಗೊಂಡಿದ್ದ ನನ್ನನ್ನು ಸ್ನೇಹಿತರು ಮತ್ತು ಚಾಲಕ ಆಸ್ಪತ್ರೆಗೆ ಸೇರಿಸಿದರು ಎಂದು ಹೇಳಿಕೆ ನೀಡಿದ್ದಾರೆ.