ಮಂಗಳೂರು : ವಕ್ಫ್ ಭೂ ಕಬಳಿಕೆಗೆ ಸಂಬಂಧಿಸಿದಂತೆ ಮೌನವಾಗಿರಲು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಣಿಪ್ಪಾಡಿ ಇದೀಗ ಸ್ಫೋಟಕ ವಾದಂತಹ ಹೇಳಿಕೆಯನ್ನು ನೀಡಿದ್ದು, ಈ ವಿಚಾರವಾಗಿ ಬಿಜೆಪಿ ಆಗಲಿ ಬಿವೈ ವಿಜಯೇಂದ್ರ ಯಾವುದೇ ಆಮೀಷ ಒಡ್ಡಿಲ್ಲ. ಬದಲಾಗಿ ಕಾಂಗ್ರೆಸ್ ನಾಯಕರೇ ನನಗೆ ಆಮಿಷ ಒಡ್ಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮಾಡಿರುವಂತಹ ಆರೋಪ ಶೇಕಡ 90% ಸುಳ್ಳು. ಬಿವೈ ವಿಜಯೇಂದ್ರ ನನ್ನ ಮನೆಗೆ ಯಾವತ್ತೂ ಬಂದಿಲ್ಲ. ನಾನು ವರದಿ ಸಲ್ಲಿಕೆ ಮಾಡುವಾಗ ಬಿವೈ ವಿಜಯೇಂದ್ರ ಇರಲೇ ಇಲ್ಲ. ನಾನು ಬಿಜೆಪಿಯವರ ಮೇಲೆ ಕಿಡಿ ಕಾರಿದ್ದಂತು ನಿಜ. ಸಿಬಿಐ ತನಿಖೆಗೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಕೊಡಲಿ. 1.60 ಲಕ್ಷ ಹೆಕ್ಟರ್ ಆಸ್ತಿ ವಕ್ಫ್ ಗೆ ಸೇರಿದ್ದು ಎಂದು ನೋಟಿಸ್ ನೀಡಿದ್ದಾರೆ.
ಆದರೆ ವಕ್ಫ್ ಬೋರ್ಡ್ ಆಸ್ತಿ ಇರುವುದು 54 ಸಾವಿರ ಹೆಕ್ಟರ್. 27 ರಿಂದ 28 ಸಾವಿರ ಹೆಕ್ಟೇರ್ ಜಮೀನು ಕಬಳಿಕೆ ಆಗಿದೆ. ಮೊದಲು ನೋಟಿಸ್ ಕೊಟ್ಟು ಏಕೆ ಹಿಂದಕ್ಕೆ ತೆಗೆದುಕೊಂಡರು? 2012-13 ರಲ್ಲಿ ಅನೇಕ ಜನರು ನನಗೆ ಆಮೀಷ ಒಡ್ಡಿದ್ದರು.ನನಗೆ ಆಮೀಷ ಒಡ್ಡಿದವರಲ್ಲಿ ಕಾಂಗ್ರೆಸ್ನವರೇ ಹೆಚ್ಚಾಗಿ ಇದ್ದರು ಎಂದು ತಿಳಿಸಿದರು.
ಬಿವೈ ವಿಜಯೇಂದ್ರ ನನಗೆ ಯಾವುದೇ ಆಮಿಷ ಒಡ್ಡಿಲ್ಲ. 2012 ಮತ್ತು 2013ರಲ್ಲಿ ವಿಜಯೇಂದ್ರ ಯಾರು ಅಂತಾನೇ ನನಗೆ ಗೊತ್ತಿರಲಿಲ್ಲ. ಅಂದು ಕಾಂಗ್ರೆಸ್ಸಿನ ಸಾಕಷ್ಟು ಜನರು ಲಂಚದ ಆಮಿಷ ಒಡ್ಡಿದ್ದರು. ವರದಿ ಜಾರಿ ಮಾಡುವ ಸಲುವಾಗಿ ಬಿಜೆಪಿ ವಿರುದ್ಧ ಚಾಟಿ ಬೀಸಿದ್ದು ನಿಜ. ಪ್ರಧಾನಮಂತ್ರಿಗೆ ಪತ್ರ ಬರೆದು ಸಿಬಿಐ ತನಿಖೆಗೆ ನಾನು ಒತ್ತಾಯ ಮಾಡಿದ್ದೆ.ಆದರೆ ಬಿಜೆಪಿಯಿಂದ ನನಗೆ ಯಾವುದೇ ಲಂಚದ ಆಮಿಷ ಬಂದಿಲ್ಲ.
ವರದಿ ಅನುಸಾರ ಸಿಬಿಐ ಗೆ ಕೊಟ್ಟರೆ ಕಾಂಗ್ರೆಸ್ ಈಗ ಬುಡಕ್ಕೆ ಬರುತ್ತದೆ ಹೀಗಾಗಿ ಈ ವಿಚಾರವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಅನ್ವರ್ ಮಾಡಿಪಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
		







