ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಳ್ಳಾರಿ ಜಿಲ್ಲೆಗೆ ಕೊಲೆ ಆರೋಪಿ ಆಗಿರುವಂತಹ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಹಾಗೂ ನಟ ದರ್ಶನ್ ಸಹೋದರಿ, ಭಾವ ಭೇಟಿ ನೀಡಿದ್ದರು. ಈ ವೇಳೆ ವಿನೀಶ್ ದರ್ಶನ್ ಅವರನ್ನು ತಬ್ಬಿಕೊಂಡು ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬಿಕ್ಕಿ ಬಿಕ್ಕಿ ಅತ್ತಿರುವ ಪ್ರಸಂಗ ನಡೆಯಿತು.
ಇಂದು ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೇಶ್ ಭೇಟಿಯಾದರು. ಅಪ್ಪನ ಮುಖ ನೋಡುತ್ತಿದ್ದಂತೆ ಪುತ್ರ ವಿನೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವೇಳೆ ಮಗನನ್ನು ತಬ್ಬಿ ದರ್ಶನ್ ಸಂತೈಸಿದ್ದಾರೆ. ಇದೆ ಸಂದರ್ಭದಲ್ಲಿ ಸೆಂಟ್ರಲ್ ಜೈಲಿನಲ್ಲಿರುವ ಅಪ್ಪನ ಆರೋಗ್ಯವನ್ನು ವಿನೀಶ್ ವಿಚಾರಿಸಿದ. ಆದಷ್ಟು ಬೇಗ ಹೊರ ಬರುತ್ತೇನೆ ಆರಾಮಾಗಿರು ಎಂದು ದರ್ಶನ್ ಪುತ್ರನಿಗೆ ತಿಳಿಸಿದ್ದಾರೆ.
ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪುತ್ರ ವಿನೀಶ್ ಕಣ್ಣೀರಿಟ್ಟಿದ್ದಾನೇ. ಮಗ ಅಳುವುದನ್ನು ಕಂಡು ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಭಾವುಕರಾಗಿದ್ರು. ವಿಜಯಲಕ್ಷ್ಮಿ ತಂಗಿ ಗಂಡ ಸುಶಾಂತ್ ನಾಯ್ಡು, ಉಪಸ್ಥಿತಯಿದ್ದರು.ಪತ್ನಿ ಪುತ್ರನ ಭೇಟಿಗೆ 45 ನಿಮಿಷಗಳ ಕಾಲ ಬಂಧಿ ಖಾನೆಯ ಉತ್ತರ ವಲಯದ ಡಿ ಐ ಜಿ ಪಿ ಟಿ ಶೇಷ ಅವರಿಂದ ಅನುಮತಿ ನೀಡಲಾಗಿದೆ.