ಬೆಂಗಳೂರು : ತನ್ನ ಸಹ ಕಲಾವಿದಯ ಮೇಲೆ ಅತ್ಯಾಚಾರ ಆಗಿರುವ ಆರೋಪದ ಅಡಿ ಇದೀಗ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಗೂ ಕಿರುತೆರೆ ನಟ ಮಡೆನೂರು ಮನುವನ್ನು ನಿನ್ನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದರು. ಅಲ್ಲದೆ ಇಂದು ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರುಪಡಿಸಿ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದೀಗ ಮಡೆನೂರು ಮನು ಮತ್ತೊಂದು ಸ್ಫೋಟಕವಾದ ಆಡಿಯೋ ಬಿಡುಗಡೆ ಮಾಡಿದ್ದಾನೆ.
ಹೌದು ಕಿರುತೆರೆ ನಟ ಒಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಡೆನೂರು ಮನು ಸ್ಫೋಟಕವಾದ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಆಡಿಯೋ ದಲ್ಲಿ ಇಬ್ಬರು ಚೆನ್ನಾಗಿದ್ದೇವೆ. ಸ್ವಲ್ಪ ದಿನ ಆಕೆಗೆ ನಾನು ಟೈಮ್ ಕೊಡಲು ಆಗಿಲ್ಲ. ಆಕೆ ಮೇಲೆ ಅತ್ಯಾಚಾರ ನಡೆಸಿಲ್ಲ ಎಂದಿದ್ದಾರೆ.
ಅಲ್ಲದೇ ಆಕೆಯ ಜೊತೆಗೆ ನಾನು ಸಂಸಾರ ಮಾಡಿದ್ದೇನೆ. ನನ್ನ ಮೇಲೆ ಅವಳು ಅತ್ಯಾಚಾರ ದೂರು ಕೊಡಲು ಸಾಧ್ಯವೇ ಇಲ್ಲ. ನಾನು ಮಿಂಚುಗೆ ತಾಳಿ ಕಟ್ಟಿದ್ದೇನೆ ಅವಳೇ ನನ್ನ ಹೆಂಡತಿ. ನಾನು ಅವಳು ಇನ್ನು ಮುಂದೆ ಚೆನ್ನಾಗಿರುತ್ತೇವೆ. ನಮ್ಮಿಬ್ಬರ ನಡುವೆ ಯಾರು ಮಧ್ಯಪ್ರವೇಶಿಸುವುದು ಬೇಡ. ಎಂದು ಮಡೆನೂರು ಮನು ಹೊಸ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಅತ್ತ ಇನ್ನೊಂದು ಕಡೆ ಅತ್ಯಾಚಾರ ಸಂತ್ರಸ್ತೆ ಯಾವುದೇ ಕಾರಣಕ್ಕೂ ಮಡೆನೂರು ಮನು ವಿರುದ್ಧ ಕೇಸ್ ಹಿಂಪಡೆಯುವುದಿಲ್ಲ. ಆತನ ವಿರುದ್ಧ ನನ್ನ ಬಳಿ ಎಲ್ಲಾ ಸಾಕ್ಷಿಗಳಿವೆ ಹಂತ ಹಂತವಾಗಿ ಎಲ್ಲಾ ಸಾಕ್ಷಿಗಳನ್ನು ಬಿಡುಗಡೆ ಮಾಡುತ್ತೇನೆ. ಅವನ ಹೆಂಡತಿಯಿಂದಲೇ ಮಡೆನೂರು ಮನು ಹಾಳಾಗಿದ್ದು ಎಂದು ಸಂತ್ರಸ್ತೇ ಹೇಳಿದ್ದಾರೆ. ಇನ್ನು ಇನ್ನೊಂದು ಕಡೆ ಮಡೆನೂರು ಮನು ಪತ್ನಿ ನನ್ನ ಪತಿ ಅಂತ ಕೆಲಸ ಮಾಡುತ್ತಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲವೇ? ಅವರು ನಟಿಸಿರುವ “ಕುಲದಲ್ಲಿ ಕೀಳ್ಯಾವುದೋ” ಸಿನಿಮಾ ನೋಡಿ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಒಂದು ಪ್ರಕರಣ ಎಲ್ಲಿಗೆ ಹೋಗಿ ತಲುಪುತ್ತೋ ಎಂದು ಕಾದು ನೋಡಬೇಕು.