ನವದೆಹಲಿ : ರಾಜ್ಯಾಧ್ಯಕ್ಷರ ನಾಯಕತ್ವದ ವಿರುದ್ಧ ನಿಲುವು ತೋರಿದ್ದರೆ ಹಿನ್ನೆಲೆಯಲ್ಲಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿಯು ಕಾರಣ ನೀಡುವಂತೆ ನೋಟಿಸ್ ನೀಡಿದೆ. ಈ ವಿಚಾರವಾಗಿ ಶಾಸಕ ಯತ್ನಾಳ್ ನನಗೆ ಬಿಜೆಪಿಯಿಂದ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ. ವಾಟ್ಸಾಪ್ನಲ್ಲಿ ಬಂದಿರುವಂತಹ ನೋಟಿಸ್ ಅನ್ನು ಅವರೆ ಕಳಿಸಿದ್ದಾರೆ ಎಂದು ಹೇಗೆ ನಂಬಲಿ? ನನಗೆ ಬಂದಿರುವಂತಹ ನೋಟೀಸ್ ಡುಬ್ಲಿಕೇಟ್ ಆಗಿದ್ದು, ಇದೆಲ್ಲ ವಿಜಯೇಂದ್ರನದ್ದೇ ಕೆಲಸ ಎಂದು ಸ್ಪೋಟಕ ಹೇಳಿಕೆ ನೀಡಿದರು.
ನವದೆಹಲಿಯಲ್ಲಿ ಮಾತನಾಡಿರುವ ಅವರು, ನನಗೆ ಇಲ್ಲಿಯವರೆಗೆ ಮೂರು ಸಲ ನೋಟಿಸ್ ಕೊಟ್ಟಿದ್ದಾರೆ. ಎರಡು ಸಲ ಉತ್ತರ ಕೊಟ್ಟಿದ್ದೇನೆ. ಇದೀಗ ಮೂರನೇ ಬಾರಿ ಬಂದಿರುವಂತ ನೋಟಿಸ್ ಡುಬ್ಲಿಕೇಟ್ ಇದೆ ಅಂತ ಅನಿಸುತ್ತಿದೆ. ಆವಾಗ ನಾನು ಉತ್ತರನೇ ಕೊಡಲಿಲ್ಲ. ನನಗೆ ಗೊತ್ತಾಯ್ತು ಇದು ವಿಜಯೇಂದ್ರ ಮಾಡಿಸಿರುವ ಕೆಲಸ ಇರಬಹುದು ಅಂತ ಅನಿಸಿದೆ ಎಂದು ವಾಗ್ದಾಳಿ ನಡೆಸಿದರು.
ನೋಟಿಸ್ ಅಧಿಕೃತವಾಗಿ ನನಗೆ ಮೇಲ್ ಮೂಲಕ ಬಂದಿಲ್ಲ. ಅಥವಾ ಪೋಸ್ಟ್ ಮೂಲಕವು ಬಂದಿಲ್ಲ. ಅಧಿಕೃತವಾಗಿ ನೋಟಿಸ್ ಬರಬೇಕಲ್ಲವೆ? ವಾಟ್ಸಪ್ ಅಧಿಕೃತ ಅಂತ ಹೇಗೆ ಹೇಳೋಕೆ ಆಗುತ್ತದೆ? ಶಿಸ್ತು ಸಮಿತಿಯ ಚೆರ್ಮನ್ ವಾಟ್ಸಾಪ್ನಲ್ಲಿ ನೋಟಿಸ್ ನೀಡಿದ್ದಾರೆ ಅನ್ನುವುದು ಯಾವ ಗ್ಯಾರಂಟಿ? ನನಗೆ ಯಾವುದೇ ಭಯವಿಲ್ಲ. ಯಡಿಯೂರಪ್ಪ ಹಾಗೂ ವಿಜಯೇಂದ್ರಗೆ ಭಯವಿದೆ. ಅಪ್ಪ ಮಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಸರೆಂಡರ್ ಆಗಿದ್ದಾರೆ ಎಂದರು..
ವಿಜಯೇಂದ್ರ ಬಹಳ ಚಾಲೂ ಇದಾನೆ ನೋಟಿಸ್ ಡೂಪ್ಲಿಕೇಟ್ ಇದೆ ಅಂತ ಅನಿಸುತ್ತಿದೆ. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಅವರ ಅಪ್ಪನ ಸಹಿ ಮಾಡಿ ಫೈಲ್ ಕ್ಲಿಯರ್ ಮಾಡಿದ್ದಾನೆ ಅಂತ ಈ ಹಿಂದೆ ಹರಿಪ್ರಸಾದ್ ಈ ಬಗ್ಗೆ ಆರೋಪ ಮಾಡಿದ್ದರು. ನನಗೆ ಯಾವುದೇ ನೋಟೀಸ್ ಬಂದಿಲ್ಲ ವಾಟ್ಸಪ್ ನಲ್ಲಿ ಬಂದಿರುವಂತಹ ನೋಟೀಸ್ ಹೇಗೆ ನಂಬಲಿ? ಎಂದು ಪ್ರಶ್ನಿಸಿದರು.