ಬೆಂಗಳೂರು : ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಯೂಟ್ಯೂರ್ ಸಮೀರ್ ಎಂ.ಡಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಮೀರ್ ಎಂಡಿ ಹೊಸ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ನನಗೆ ವಿದೇಶದಿಂದ ಯಾವುದೇ ಹಣ ಬಂದಿಲ್ಲ ಎಂದು ಬ್ಯಾಂಕ್ ದಾಖಲೆಯನ್ನು ತೋರಿಸಿದ್ದಾರೆ. ಬ್ಯಾಂಕ್ ದಾಖಲೆ ತೋರಿಸಿ ಸಮೀರ್ ಹೊಸ ವಿಡಿಯೋ ಮಾಡಿದ್ದಾರೆ ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನನಗೆ ಯಾವುದೋ ಟೆರರಿಸ್ಟ್ ಗುಂಪಿನಿಂದ ಇಸ್ಲಾಮಿಕ್ ಕಂಟ್ರಿಯಿಂದ ಹಣ ಬಂದಿದೆ ಅಂತ ಆರೋಪ ಕೇಳಿ ಬಂದಿದ್ದು ಆ ಕುರಿತು ವಿಡಿಯೋ ಮಾಡುತ್ತಿದ್ದೇನೆ ನಾನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಈ ರೀತಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಅವತ್ತು ಕೇಳುತ್ತಿದ್ದೇನೆ ನನಗೆ ಯಾವುದೇ ರೀತಿಯಾದಂತಹ ವಿದೇಶಿ ಕಂಟ್ರಿಗಳಿಂದ ಕಂಡುಬಂದಿಲ್ಲ. ಹಾಗ ಏನಾದರೂ ಬಂದಿದ್ದರೆ ತನಿಖೆಯಲ್ಲಿ ಇಷ್ಟೊತ್ತಿಗೆ ಹೊರಗಡೆ ಬರಬೇಕಾಗಿತ್ತು.
ಎಸ್ ಐ ಟಿ ಅಧಿಕಾರಿಗಳ ವಿಚಾರಣೆಗೆ ಕರೆದಾಗ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ಸಲ್ಲಿಸಿದ್ದೇನೆ. ಈಗಾಗಲೇ ತನಿಖೆ ನಡೆಯುತ್ತಿದೆ. ಆಪ್ ಪ್ರಮೋಷನ್, ಇನ್ಸೂರೆನ್ಸ್ ಪ್ರಮೋಷನ್ ಸೇರಿದಂತೆ ಈ ರೀತಿ ಸೈಡ್ ಇನ್ಕಮ್ ಗೋಸ್ಕರ ವಿಡಿಯೋ ಮಾಡಿದ್ದೇನೆ ಹೊರತು ಒಂದು ಹುಡುಗಿ ಗ್ಯಾಂಗ್ ರೇಪ್ ಆಗಿ ಸತ್ತೋಗಿರುವುದನ್ನ ಪವಿತ್ರವಾದ ಸಾವು ಅಂತ ಹೇಳೋ ಕೀಳು ಮಟ್ಟಕ್ಕೆ ಇನ್ನು ಹೋಗಿಲ್ಲ ಹೋಗೋದಿಲ್ಲ.
ನನ್ ವಿಡಿಯೋ ಸುಳ್ಳು ಅಂತ ಹೇಳುತ್ತಿದ್ದಾರಲ್ಲ ಹಾಗಾದ್ರೆ 20 ವರ್ಷಗಳ ಹಿಂದೆ ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿರುವಂತಹ ಈ ವರದಿ ಸುಳ್ಳ? ಪೊಲೀಸರ UDR ವರದಿಯಲ್ಲಿ ಅನಾಥ ಶಿವಗಳು ಸಿಕ್ಕಿವೆ. ಸೌಜನ್ಯಾನ ಸಾಯಿಸಿದವರು ಯಾರು? ಪದ್ಮಲತಾನ ಸಾಯಿಸಿದವರು ಯಾರು? ಆನೆ ಮಾವುತ ನಾರಾಯಣ ಹಾಗೂ ಅವರ ತಂಗಿಯವರನ್ನು ಭೀಕರವಾಗಿ ಸಾಯಿಸಿದವರು ಯಾರು? ನನ್ನ ವಿಡಿಯೋ ಸುಳ್ಳು ಅಂತಾದರೆ ಇವೆಲ್ಲ ಘಟನೆಗಳು ಸುಳ್ಳ ಅಂತ ಪ್ರಶ್ನಿಸಿದ್ದಾರೆ.