ಹುಬ್ಬಳ್ಳಿ : ಸಹಕಾರ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಸರ್ಕಾರ ಈ ಒಂದು ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದೆ. ಇದರ ಬೆನ್ನಲ್ಲೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಹನಿಟ್ರ್ಯಾಪ್ ಸಂಬಂಧಪಟ್ಟಂತೆ ನನ್ನ ಬಳಿ ಹಲವು ದಾಖಲೆಗಳಿವೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಸ್‌ಸಿ/ಎಸ್‌ಟಿ ನಾಯಕರನ್ನು ಮುಗಿಸಿದ್ದೆ ಕಾಂಗ್ರೆಸ್ ಪಕ್ಷ. ಕೆ.ಎನ್ ರಾಜಣ್ಣ, ರಮೇಶ್ ಜಾರಕಿಹೊಳಿ ಮುಗಿಸಿದ್ದು ಯಾರು? ಹಾಗಾಗಿ ರಾಜಕಾರಣ ಹೀಗಾಗಬಾರದು. ಹನಿಟ್ರ್ಯಾಪ್ ಹಿಂದೆ ಮಹಾನ್ ನಾಯಕರ ಕೈವಾಡವಿದೆ. ಎರಡು ಪಕ್ಷದ ಮಹಾನ್ ನಾಯಕರ ಕೈವಾಡ ಇದೆ. ನನ್ನ ಬಳಿಯೂ ಕೆಲವು ದಾಖಲೆಗಳು ಇವೆ. ನನಗೆ ಹಾಯ್ ಅಂದರೆ ನಾನು ಬಾಯ್ ಎಂದು ಹೇಳುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದರು.
ನನ್ನ ವಿರುದ್ಧವು ಶತ್ರು ಸಂಹಾರ ಯಾಗ ನಡೆದಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಯಾಗ ನಡೆದಿದೆ. ಹುಬ್ಬಳ್ಳಿಯಲು ಕೂಡ ಒಂದು ಯಾಗ ನಡೆದಿದೆ. ಆದರೆ ನನಗೆ ಏನೂ ಆಗಲ್ಲ. ನನ್ನ ಜಾತಕದಲ್ಲಿ ಹಾಗೆ ಇದೆ. ಯಾಗ ಮಾಡಿದರು ಶತ್ರು ಸಂಹಾರ ಆಗಿಲ್ಲ. ಯಾಗ ಮಾಡಿಸಿದ ಮೇಲೆ ಸಿದ್ದರಾಮಯ್ಯಗೆ ಕಾಲು ನೋವಾಗಿದ್ದು ಎಂದು ಶಾಸಕ ಯತ್ನಾಳ್ ತಿಳಿಸಿದರು.