ಮೈಸೂರು : ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಹಾಗೂ ಇಡಿ ಅಧಿಕಾರಿಗಳು ತನಿಖೆಯನ್ನು ಚುರುಕು ಗೊಳಿಸಿದ್ದು, ಇದರ ಬೆನ್ನಲ್ಲೇ ಎಂಬ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಸ್ನೇಹಮಯಿ ಕೃಷ್ಣ ಅವರ ಆಡಿಯೋ ಒಂದು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮತ್ತೊಂದು ದೂರು ದಾಖಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ಈಗ ಹುಚ್ಚರಾಗಿದ್ದಾರೆ. ರಾತ್ರಿ ವೇಳೆಯಲ್ಲೂ ಲೋಕಾಯುಕ್ತ ಕಚೇರಿಯ ಸುತ್ತ ಸುತ್ತುತ್ತಿದ್ದಾರೆ. ಅವರ ಇನ್ನೊಂದು ಆಡಿಯೋ ನನಗೆ ಸಿಕ್ಕಿದೆ. ಈ ಬಗ್ಗೆ ಕಾನೂನಾತ್ಮವಾಗಿ ಹೋರಾಟ ಮಾಡುತ್ತೇನೆ. ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರನ್ನ ದಾಖಲಿಸುತ್ತೇನೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.
ಕೆ. ಆರ್ ಕ್ಷೇತ್ರದ ಶಾಸಕ ಶ್ರೀವತ್ಸ, ಸಿಎಂ ಸಿದ್ದರಾಮಯ್ಯ ಅವರು ಮುಡಾದ 14 ಸೈಟ್ಗಳನ್ನ ವಾಪಸ್ ಕೊಡುವವರೆಗೆ ಹೋರಾಟ ಮಾಡಿ ಈಗ ಸುಮ್ಮನಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಸ್ನೇಹ ಮೈ ಕೃಷ್ಣ ಅವರ ಆಡಿಯೋ ಒಂದು ಸಿಕ್ಕಿದ್ದರಿಂದ ಅವರ ವಿರುದ್ಧ ಮತ್ತೊಂದು ದೂರನ್ನು ದಾಖಲಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದರು.