ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ಸುತ್ತ ಮುತ್ತ ಭಾಗದಲ್ಲಿ ನಕ್ಸಲರ ಚಟುವಟಿಕೆ ಪುನರಾರಂಭವಾಗಿತ್ತು. ಈ ಸಂದರ್ಭದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿತ್ತು. ಇದೀಗ ನಕ್ಸಲರಿಗೆ ಶರಣಾಗಲು ನಾನೇ ಕರೆ ಕೊಟ್ಟಿದ್ದೇನೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ANF ನಕ್ಸಲ್ ಕಾರ್ಯಚರಣೆ ನಡೆಸುತ್ತಿದ್ದು, ಇದೀಗ ಅವರಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಅಲ್ಲದೆ ನಕ್ಸಲರಿಗೆ ಶರಣಾಗಲು ನಾನೇ ಕರೆಕೊಟ್ಟಿದ್ದೇನೆ. ನಕ್ಸಲರ ಮನ ಪರಿವರ್ತನೆ ಆಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಕ್ಸಲರ ಶರಣಾಗತಿಗೆ ಸರ್ಕಾರ ಸಮಿತಿ
ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಂಗಳೂರು ಭಾಗದಲ್ಲಿ ನಕ್ಷಲ್ ಚಟುವಟಿಕೆ ಹೆಚ್ಚಾಗಿದ್ದು ಈ ವೇಳೆ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಿದ ಬಳಿಕ ಇದೀಗ 6 ನಕ್ಸಲರು ಚಿಕ್ಕಮಂಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಗೆ ನಿರ್ಧರಿಸಿದ್ದು, ಮುಂದಿನ ಮೂರು ದಿನಗಳಲ್ಲಿ ಆರು ನಕ್ಸಲರು ಶರಣಾಗೋ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು ಚಿಕ್ಕಮಗಳೂರಿನ ಜಿಲ್ಲಾಡಳಿತದ ಮುಂದೆ ಶರಣಾಗತಿ ಆಗಲು ನಿರ್ಧಾರ ಮಾಡಿದ್ದಾರೆ. ಕರ್ನಾಟಕ, ಕೇರಳ, ಆಂಧ್ರಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲರು ಇದೀಗ ಶರಣಾಗತಿಗೆ ನಿರ್ಧಾರ ಮಾಡಿದ್ದಾರೆ. ಕರ್ನಾಟಕದ ನಕ್ಸಲ್ ತುಂಗಾ ದಳದ ನಕ್ಸಲ್ ನಾಯಕಿ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ದಕ್ಷಿಣ ಭಾರತದ ಮೋಸ್ಟ ವಾಂಟೆಡ್ ನಕ್ಸಲ್ ಜೀಶ ಆಂಧ್ರಪ್ರದೇಶದ ಕೆ. ವಸಂತ್, ಮಾರಪ್ಪ ಅರೋಲಿ ಶರಣಾಗತಿಗೆ ನಿರ್ಧರಿಸಿದ್ದಾರೆ. ಹೀಗಾಗಿ ಸರ್ಕಾರ ಕೂಡ ನಕ್ಸಲರ ಶರಣಾಗತಿಗೆ ಸನ್ಮತಿ ಸೂಚಿಸಿದೆ.
ಈ ಬಗ್ಗೆ ಶಾಂತಿಗಾಗಿ ನಕ್ಸಲರು ನಾಗರೀಕ ವೇದಿಕೆಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಸದಸ್ಯರು ಚರ್ಚಿಸಿದ್ದಾರೆ. ಮೂರು ದಿನಗಳಲ್ಲಿ ಆರು ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂರು ತಿಂಗಳಿನಿಂದ ಚಿಕ್ಕಮಂಗಳೂರು ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿತ್ತು. ವಿಕ್ರಂ ಎನ್ಕೌಂಟರ್ ಬಳಿಕ ಸರ್ಕಾರ ನಕ್ಸಲರಿಗೆ ಶರಣಾಗತಿಗೆ ಆದ್ಯತೆ ನೀಡಿತ್ತು. ಹಾಗಾಗಿ ಇದೀಗ 6 ನಕ್ಸಲರು ತಾವಾಗಿಯೇ ಶರಣಾಗತಿಗೆ ನಿರ್ಧಾರ ಕೈಗೊಂಡಿದ್ದಾರೆ.