ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಕುರಿತು ಇಂದು ಆದೇಶ ಹೊರ ಬರಲಿದೆ. ಆದರೆ ದರ್ಶನ್ ಕೋರ್ಟ್ ನಲ್ಲಿ ನನಗೆ ವಿಷ ಕೊಡಿ ಅಂತ ಹೇಳಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಹೌದು ನಟ ದರ್ಶನ್ ಕೋಡ್ ನಲ್ಲಿ ವಿಷ ಕೊಡಿ ಅಂತ ಹೇಳಿದ್ದಾರೆ. ನನ್ನದೊಂದು ಮನವಿ ಇದೆ ಸ್ವಲ್ಪ ಪಾಯಿಸನ್ ಬೇಕು ಕೊಡಿ ಬಿಸಿಲು ನೋಡಿ ಒಂದು ತಿಂಗಳು ಆಯ್ತು ನನಗೆ ವಿಷ ಕೊಡಿ ಅಂತ ದರ್ಶನ್ ಮನವಿ ಮಾಡಿದ್ದಾರೆ ಅಂತ ಮಾಹಿತಿ ತಿಳಿದು ಬಂದಿದೆ. ಹಾಸಿಗೆ ದಿಂಬು ಮನೆಯ ಊಟ ವಿಚಾರಕ್ಕೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದ್ದು ಅಲ್ಲದೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ಇವೆರಡರ ಕುರಿತು ಆದೇಶ ಹೊರಬೀಳಲಿದೆ.
ಇದರ ಮಧ್ಯ ಬಿಸಿಲು ನೋಡಿ ಒಂದು ತಿಂಗಳಾಯಿತು ಕೈಯಲ್ಲ ಫಂಗಸ್ ಆಗಿದೆ. ಹಾಗಾಗಿ ವಿಷ ನೀಡಲು ಆದೇಶ ನೀಡುವಂತೆ ದರ್ಶನ್ ಮನವಿ ಮಾಡಿದ್ದಾರೆ.ಈ ವೇಳೆ ಜಡ್ಜ್ ಹಾಗೆಲ್ಲ ಕೇಳಬಾರದು ಅಂತ ಹೇಳಿದ್ದಾರೆ ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ ಎಂದು ಜಡ್ಜ್ ತಿಳಿಸಿ ಹೇಳಿ ಇಂದು ಮಧ್ಯಾಹ್ನ 3:30ಕ್ಕೆ ಆದೇಶ ನೀಡುತ್ತೇವೆ ಎಂದು ಹೇಳಿದರು.