ಬೆಂಗಳೂರು : ನಿನ್ನೆ ತಾನೆ ಬೆಂಗಳೂರಿನಲ್ಲಿ ಹಲವು ಬಾಲಕರು ನಾಪತ್ತೆಯಾಗಿದ್ದು ಬಳಿಕ ಮೈಸೂರಲ್ಲಿ ಪ್ರತ್ಯಕ್ಷವಾಗಿದ್ದ ಘಟನೆ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಮತ್ತೋರ್ವ ವಿದ್ಯಾರ್ಥಿ ನಾನು ಅಸತ್ಯ ಪ್ರಪಂಚದಲ್ಲಿ ಸತ್ಯ ಹುಡುಕುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಕಾಲೇಜು ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಮೋಹಿತ್ ಋಷಿ ಎಂದು ತಿಳಿದುಬಂದಿದೆ.ಈತ ಜನವರಿ 16 ರಂದು ಮುಂಜಾನೆ 4 ಗಂಟೆ ಸುಮಾರಿಗೆ ಮನೆಯಲ್ಲೇ ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದಾನೆ.ಮೋಹಿತ್ ನಗರದ ಕಾಲೇಜುವೊಂದರಲ್ಲಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಎಂದು ತಿಳಿದುಬಂದಿದೆ.
ಮನೆಯಿಂದ ನಾಪತ್ತೆಯಾಗುವ ಮುನ್ನ ಆತ ತನ್ನ ಬುಕ್ ನಲ್ಲಿ ನಾನು ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೊರಟಿದ್ದೇನೆ. ಈ ಅಧರ್ಮದ ಜಗತ್ತಿನಲ್ಲಿ ನನಗೆ ಇರಲು ಆಗುವುದಿಲ್ಲ.ನಾನು ವಿಷ್ಣುವಿನ ಮಗ ನನಗೆ ಏನು ಆಗಲ್ಲ ದಯವಿಟ್ಟು ಯಾರು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಬರೆದಿದ್ದಾನೆ.
ಪೋಷಕರು ಎಂದಿನಂತೆ ಆತನನ್ನು ಎಬ್ಬಿಸಲು ಆತನ ರೂಮ್ಗೆ ತೆರಳಿದಾಗ ಆತ ಅಲ್ಲಿ ಇಲ್ಲದಿರುವುದು ಕಂಡು ಬಂದಿದೆ ಆತಂಕಕ್ಕೆ ಒಳಗಾದ ಪೋಷಕರು ಅಲ್ಲಿ ಬೆಡ್ ಮೇಲೆ ಇದ್ದಂತಹ ಪುಸ್ತಕ ಓದಿದಾಗ ನಾಪತ್ತೆಯಾಗಿರೋದು ಬೆಳಕಿಗೆ ಬಂದಿದೆ. ತಕ್ಷಣ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಮೋಹಿತ್ ಪೋಷಕರು ದೂರು ನೀಡಿದ್ದಾರೆ. ಬಹುದ ಕಲಿಸಿಕೊಂಡ ಪೊಲೀಸರು ಸದ್ಯ ಬೆಂಗಳೂರಿನ ಎಲ್ಲಾ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿ ತನಿಖೆ ಆರಂಭಿಸಿದ್ದಾರೆ.