ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳ್ಳಾರಿ ಜೈಲಿನಲ್ಲಿ ಇರುವ ನಟ ದರ್ಶನ್ ಅವರನ್ನು ಭೇಟಿ ಮಾಡಿದ ವಕೀಲರಾದ ಸುನಿಲ್ ಅವರು, ಅಚ್ಚರಿಯ ಹೇಳಿಕೆ ಒಂದನ್ನು ನೀಡಿದ್ದು ನಮಗೆ ನೂರಕ್ಕೆ ನೂರರಷ್ಟು ಜಾಮೀನು ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಟ ದರ್ಶನ್ ಭೇಟಿ ಬಳಿಕ ಮಾತನಾಡಿದ ವಕೀಲ ಸುನೀಲ್, ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 27ರಂದು ನಡೆಯಲಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಸಮಯ ತೆಗೆದುಕೊಂಡಿದ್ದಾರೆ. ಬೇಲ್ ಅರ್ಜಿ ರಿಜೆಕ್ಟ್ ಆದರೆ ಹೈಕೋರ್ಟ್ಗೆ ಹೋಗುತ್ತೇವೆ. ನೂರಕ್ಕೆ ನೂರರಷ್ಟು ಜಾಮೀನು ಸಿಗುವ ವಿಶ್ವಾಸವಿದೆ. ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ನಮಗೆ ಕೆಲವೊಂದು ಡೌಟ್ಸ್ ಇತ್ತು, ಎಲ್ಲಾ ಕ್ಲಾರಿಫಿಕೇಷನ್ ತಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಹೊಸ ಮ್ಯಾನುವಲ್ ಪ್ರಕಾರ ಸೌಲಭ್ಯ ನೀಡಲು ಜೈಲಾಧಿಕಾರಿಗೆ ಮನವಿ ಮಾಡಲಾಗಿದೆ. ಹೊಸ ಮ್ಯಾನುವಲ್ ಪ್ರಕಾರ ಮೆಡಿಕಲ್ ಬೆಡ್ ಮತ್ತು ದಿಂಬು ಕೊಡಲು ಅವಕಾಶ ಇದೆ. ಎರಡು ದಿನದಲ್ಲಿ ಮೂಲ ಸೌಲಭ್ಯ ನೀಡದಿದ್ದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇವೆ. ನ್ಯಾಯಾಲಯದಿಂದ ಬಂದಿರುವ ಆದೇಶದ ಬಗ್ಗೆ ಜೈಲ್ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಎಂದು ಅವರು ತಿಳಿಸಿದರು.