ಬೆಂಗಳೂರು : ಸಿದ್ದರಾಮಯ್ಯ ಸಿಎಂ ಆಗಿ ಅರಸು ದಾಖಲೆ ಮುರಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಒಳ್ಳೆಯ ವ್ಯಕ್ತಿತ್ವ ನಾಯಕ ಉತ್ತಮ ಆಡಳಿತ ಕೊಟ್ಟಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಹೇಳಿಕೆ ನೀಡಿದರು.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ವಿಚಾರವಾಗಿ ಏನೇ ಇದ್ದರೂ ಕೇಂದ್ರದ ನಾಯಕರು ತೀರ್ಮಾನ ಮಾಡಬೇಕು. ನಮ್ಮದು ದಿನ ಪಕ್ಷ ನಾವೆಲ್ಲರೂ ಶಿಸ್ತಿನ ಸಿಪಾಯಿಗಳು ಕೇಂದ್ರದ ನಾಯಕರು ಯಾವಾಗ ಮಾತನಾಡುತ್ತಾರೆ ಎಂಬ ನಿರೀಕ್ಷೆ ಇದೆ ನನಗೆ ಹಿಂದೆಯೇ ಸಚಿವ ಸ್ಥಾನ ಕೊಡಬೇಕು ಈ ಕುರಿತು ಬೇಡಿಕೆ ಇಟ್ಟಿದ್ದೇನೆ ಎಂದು ತಮ್ಮ ಮಂತ್ರಿ ಸ್ಥಾನ ಕನಸು ಬಿಚ್ಚಿಟ್ಟಿದ್ದಾರೆ.








