ಹಾವೇರಿ : ರಾಜ್ಯ ರಾಜಕಾರಣದಲ್ಲಿ ಸದ್ಯ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕೂಗು ಕೇಳಿ ಬರುತ್ತಿದ್ದು, ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಯಾವುದೇ ರೀತಿಯಾದಂತಹ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರು ನನಗೂ ಸಿಎಂ ಆಗುವ ಆಸೆ ಇದೆ ಹಾಗೂ ಕೆಪಿಸಿಸಿ ಅಧ್ಯಕ್ಷ ಇದೆ ಆದರೆ ಹೈಕಮಾಂಡ್ ತೀರ್ಮಾನ ಅಂತಿಮ ಆಗಿರುತ್ತದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೂ ಸಿಎಂ ಆಗಲು ಹಾಗೂ ಕೆಪಿಸಿಸಿ ಅಧ್ಯಕ್ಷನಾಗಲು ಆಸೆ ಇದೆ. ಆದರೆ ಅಂತಿಮವಾಗಿ ಪಕ್ಷ ತೀರ್ಮಾನ ಮಾಡುತ್ತದೆ. ಹಿಂದೆ ಸಿಎಂ ಆಗುತ್ತಾರೆ ಅಂತ ನನ್ನ ಹೆಸರು ಓಡಾಡುತ್ತಿತ್ತು. ಈಗ ಅಧ್ಯಕ್ಷ ಆಗುತ್ತಾರೆ ಅಂತ ನನ್ನ ಹೆಸರು ಓಡಾಡುತ್ತಿದೆ.
ಎಷ್ಟೇ ಹೆಸರು ಓಡಾಡಿದರು ಸಹ ನಮ್ಮ ಉತ್ಸಾಹ ಅಷ್ಟೇ. ಇದಕ್ಕೆಲ್ಲ ಆದರೆ ಪಕ್ಷದ ತೀರ್ಮಾನ ಅಂತಿಮವಾಗಿರುತ್ತದೆ. ನಾವೆಲ್ಲರೂ ಕಾದು ನೋಡಬೇಕು ಅಷ್ಟೇ. ಈ ವಿಚಾರವಾಗಿ ನಾನು ಹೈಕಮಾಂಡ್ ಗೆ ಅಗಲಿ ಇನ್ಯಾರಿಗೋ ಅಗಲಿ ಯಾವುದೇ ಒತ್ತಡ ಹಾಕಿಲ್ಲ. ಚುನಾವಣೆಯಲ್ಲಿ ಗೆಲ್ಲಿಸಿದ್ದೇವೆ ಅದರ ತೃಪ್ತಿ ನಮಗಿದೆ. ಮಂತ್ರಿಯಾಗಿ ಕೆಲಸ ಮಾಡ್ತಾ ಇದ್ದೇವೆ ತೃಪ್ತಿ ಇದೆ ಎಂದು ಸ್ಪಷ್ಟನೆ ನೀಡಿದರು.