ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ವೊಂದು ನಡೆದಿದ್ದು, ಕೌಟುಂಬಿಕ ಕಲಹಕ್ಕೆ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಬಾಬು ರೆಡ್ಡಿ ಮತ್ತು ಶಾಜಿಯ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೊದಲು ಪತಿ ಬಾಬುರೆಡ್ಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಆತನ ಮೃತ ದೇಹವನ್ನು ಕಂಡು ಪತ್ನಿ ಶಾಜಿಯಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. 17ನೇ ಫ್ಲೋರ್ ನಿಂದ ಜಿಗಿದು ಪತ್ನಿ ಶಾಜಿಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಕೌಟುಂಬಿಕ ಕಲಹದ ಶಂಕೆಯಿಂದ ದಂಪತಿ ಆತ್ಮಹತ್ಯೆ ಕಾರಣ ಎಂದು ತಿಳಿದುಬಂದಿದೆ.








