ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ ಒಂದು ನಡೆದಿದ್ದು ಕೋರ್ಟ್ ಆವರಣದಲ್ಲಿಯೇ ಪತಿಯೊಬ್ಬ ತನ್ನ ಪತ್ನಿ ಮತ್ತು ಅತ್ತಿಯ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ಕೋರ್ಟ್ ಆವರಣದಲ್ಲಿ ಈ ಒಂದು ಘಟನೆ ನಡೆದಿದೆ.
ಮಚ್ಚಿನಿಂದ ಅತ್ತೆ ಮತ್ತು ಪತ್ನಿಯನ್ನು ಕೊಲ್ಲಲು ಪತಿ ಮುತ್ತಪ್ಪ ಗಣಾಚಾರಿ ಯತ್ನಿಸಿದ್ದಾನೆ. ಮುತ್ತಪ್ಪ ಪತ್ನಿ ಐಶ್ವರ್ಯ ಹಾಗೂ ಅತ್ತೆ ಅನುಸೂಯ ಮೇಲೆ ಮುತ್ತಪ್ಪ ಗಣಾಚಾರಿ ಹಲ್ಲೆ ಮಾಡಿದ್ದಾನೆ. ತಕ್ಷಣವೇ ಪೊಲೀಸರು ಆರೋಪಿಯನ್ನು ಅಶಕ್ಕೆ ಪಡೆದಿದ್ದಾರೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ವಿಚ್ಛೇದನ ಹಿನ್ನೆಲೆಯಲ್ಲಿ ಪತಿ ಮತ್ತು ಪತ್ನಿ ಕೋರ್ಟಿಗೆ ಹಾಜರಾಗಿದ್ದರು. ಆರೋಪಿ ಮುತ್ತಪ್ಪ ಬೈಲಹೊಂಗಲ ಪಟ್ಟಣದ ನಿವಾಸಿಯಾಗಿದ್ದು, ಐಶ್ವರ್ಯ ಮತ್ತು ಅನುಸೂಯಾಗೆ ಸದ್ಯ ಧಾರವಾಡದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.