ಬೆಂಗಳೂರು : ಮದ್ಯ ಸೇವಿಸಲು ಹಣ ಕೊಡದಿದ್ದಕ್ಕೆ ಪತ್ನಿಯ ಜೊತೆ ಜಗಳವಾಡಿದ ಪತಿ, ಬಾತ್ರೂಮ್ ಆಸಿಡ್ ಸುರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸೀಡೆದಹಳ್ಳಿಯಲ್ಲಿ ನಡೆದಿದೆ. ಬಾತ್ರೂಮ್ ತೊಳೆಯುವ ಆಸಿಡ್ ನಿಂದ ಪತಿ ಸುರೇಶ್ ಪತ್ನಿಯ ಮೇಲೆ ದಾಳಿ ನಡೆಸಿದ್ದಾನೆ. ಪತ್ನಿಯ ಮೇಲೆ ಆಸಿಡ್ ದಾಳಿ ನಡೆಸಿದ ಪತಿಯನ್ನು ಸುರೇಶ್ ಎಂದು ತಿಳಿದುಬಂದಿದೆ.
26 ವರ್ಷಗಳ ಹಿಂದೆ ಸಂತ್ರಸ್ತೆಯನ್ನು ಆರೋಪಿ ಸುರೇಶ್ ಮದುವೆಯಾಗಿದ್ದ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನ ಊರಿನಲ್ಲಿ ಈ ದಂಪತಿಗಳು ವಾಸವಿದ್ದರು. ಮೈತುಂಬ ಸಾಲ ಮಾಡಿಕೊಂಡು ಸುರೇಶ್ ಕೆಲಸಕ್ಕೆ ಹೋಗುವುದನ್ನೇ ಬಿಟ್ಟಿದ್ದ. ಸಾಲಗಾರರ ಕಾಟಕ್ಕೆ ಎರಡು ತಿಂಗಳ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದ. ಬಾಗಲಗುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಕುಟುಂಬ ವಾಸವಿತ್ತು. ಜೀವನ ನಡೆಸಲು ಸುರೇಶ್ ಪತ್ನಿ ಬ್ಯೂಟಿಷಿಯನ್ ಕೆಲಸಕ್ಕೆ ಹೋಗುತ್ತಿದ್ದರು.
ಮೇ 19 ರಂದು ಸುರೇಶ್ ಮದ್ಯ ಸೇವಿಸಲು ಪತ್ನಿಯ ಬಳಿ ಹಣ ಕೇಳಿದ್ದಾನೆ. ಹಣಕೊಡದಿದ್ದಾಗ ಜಗಳ ಮಾಡಿಕೊಂಡು ಸುರೇಶ್ ಮನೆ ಬಿಟ್ಟು ಹೊರಗೆ ಹೋಗಿದ್ದ. ಅದೇ ದಿನ ರಾತ್ರಿ 11:30ಕ್ಕೆ ಸುರೇಶ್ ಮದ್ಯ ಸೇವಿಸಿ ಮನೆಗೆ ವಾಪಸ್ ಆಗಿದ್ದಾನೆ. ಮೊಬೈಲ್ ನಲ್ಲಿ ಹಾಡು ಹಾಕಿ ಸೌಂಡ್ ಜೋರಾಗಿ ಇಟ್ಟು ಹಾಡು ಕೇಳುತ್ತಿದ್ದ. ಅಕ್ಕ ಪಕ್ಕದವರು ಜಗಳ ಮಾಡುತ್ತಾರೆ ಸೌಂಡ್ ಕಡಿಮೆ ಮಾಡಿ ಅಂತ ಪತ್ನಿ ಹೇಳಿದ್ದಾಳೆ. ಈ ವೇಳೆ ಜಗಳ ತೆಗೆದು ಪತ್ನಿಯ ಮೇಲೆ ಸುರೇಶ್ ಆಸಿಡ್ ಸುರಿದಿದ್ದಾನೆ.ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.