ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಮಳೆರಾಯ ತಣ್ಣಗಾಗಿದ್ದ ಆದರೆ ಇದೀಗ ಮತ್ತೆ ಅಬ್ಬರಿಸುತ್ತಿದ್ದು ಬೆಂಗಳೂರಿನ ಜನತೆ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದಾರೆ. ಇಂದು ಬೆಂಗಳೂರು ಮಹಾನಗರದಲ್ಲಿ ಮತ್ತೆ ಭಾರಿ ಮಳೆ ಆಗುತ್ತಿದ್ದು ಮಲ್ಲೇಶ್ವರಂ ನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಆಗುತ್ತಿದೆ.
ಹೌದು ಬೆಂಗಳೂರು ಮಹಾನಗರದ ಹಲವೆಡೆ ಭಾರಿ ಮಳೆಯಾಗುತ್ತಿ. ಇದೆ ವೇಳೆ ಮಲ್ಲೇಶ್ವರಂ ನಲ್ಲಿ ಆಟೋ ಬೈಕ್ ಗಳ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿದೆ. ಈ ವೇಳೆ ಕೆಲ ವಾಹನಗಳು ನುಜ್ಜುಗುಜ್ಜಾಗಿವೆ.ಈ ವೇಳೆ ಆಟೋದಲ್ಲಿ ಒಬ್ಬರು ಮಹಿಳೆ ಹಾಗೂ ಇಬ್ಬರೂ ಪುರುಷರು ಇದ್ದಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಾಜಾಜಿನಗರ, ಭಷ್ಯಂ ಸರ್ಕಲ್ ರಸ್ತೆ, ವಿಜಯನಗರ, ಮಂಜುನಾಥ ನಗರ ಮಾಗಡಿ ರಸ್ತೆ ಸೇರಿ ಹಲವೆಡೆ ಭಾರಿ ಮಳೆ ಆಗುತ್ತಿದೆ. ಮಳೆಗೆ ರಾಜಾಜಿನಗರದ ಒಂದು ಭಾಗದ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ಮಳೆಯ ರಭಸಕ್ಕೆ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯುತ್ತಿದೆ ಮಳೆಯಿಂದ ಫುಲ್ ಟ್ರಾಫಿಕ್ ಜಾಮ್ ಆಗಿದ್ದು ಸವಾರರು ಪರದಾಟ ನಡೆಸುತ್ತಿದ್ದಾರೆ.
ಅಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸುತ್ತಮುತ್ತ ಮತ್ತೆ ಮಳೆ ಆರ್ಭಟ ಜೋರಾಗಿದ್ದು, ಕೇವಲ ಒಂದು ಗಂಟೆ ಸುರಿದ ಮಳೆಗೆ ಬಡಾವಣೆಯೊಂದು ಸಂಪೂರ್ಣವಾಗಿ ಜಲಾವೃತವಾಗಿದೆ. ದೇವನಹಳ್ಳಿ ತಾಲೂಕಿನ ವಿಜಯಪುರದ ಮಂಡಿಬೆಲೆ ರಸ್ತೆಯಲ್ಲಿ ಘಟನೆ ನಡೆದಿದೆ.
ಪ್ರವಾಹದ ರೀತಿ ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿದೆ. ಮಳೆ ನೀರಿನ ರಸಕ್ಕೆ ಕಂಗಾಲದ ವಿಜಯಪುರ ಪಟ್ಟಣದ ನಿವಾಸಿಗಳು ಮಳೆ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಯಿಂದ ಕರೆತರಲು ಪೋಷಕರು ಪರದಾಡುವ ಘಟನೆ ನಡೆಯಿತು. ಚರಂಡಿ ಕಾಲುವೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.