ಬೆಂಗಳೂರು : ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಇದೀಗ ಫಲಿತಾಂಶದಲ್ಲಿ ಶಿಕ್ಷಣ ಇಲಾಖೆ ಭಾರಿ ಎಡವಟ್ಟು ಮಾಡಿದೆ. 600 ಅಂಕಗಳಿಗೆ ಬೋರ್ಡ್, 683 ಅಂಕಗಳನ್ನು ಕೊಟ್ಟಿದೆ. ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಇದೀಗ ಭಾರಿ ಲೋಪ ಕಂಡುಬಂದಿದೆ.
Karresults.nic.in ವೆಬ್ ಸೈಟ್ ನಲ್ಲಿ ಈ ಒಂದು ಫಲಿತಾಂಶ ಪ್ರಕಟವಾಗಿದ್ದು, ಡಿಜಿ ಲಾಕರ್ ನಲ್ಲಿ ಅಂಕಪಟ್ಟಿ ಸರಿಯಾದ ರೀತಿಯಲ್ಲಿ ಪ್ರಕಟವಾಗಿದೆ. ಆದರೆ ವೆಬ್ಸೈಟ್ನಲ್ಲಿ ಕೊಟ್ಟ ಫಲಿತಾಂಶದಲ್ಲಿ ಮಾತ್ರ ಎಡವಟ್ಟು ಆಗಿದ್ದು, ಬೋರ್ಡ್ ಆರು ವಿಷಯದಲ್ಲೂ ನೂರಕ್ಕಿಂತ ಹೆಚ್ಚು ಅಂಕ ಕೊಟ್ಟಿದೆ. 2025ರ ಬ್ಯಾಚ್ನಲ್ಲಿ ಬರೆದಿರುವ ವಿದ್ಯಾರ್ಥಿ ಫಲಿತಾಂಶದಲ್ಲಿ ಎಡಬಟ್ಟು ಆಗಿದೆ ಮರು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಯ ಫಲಿತಾಂಶದಲ್ಲಿ ಈ ಒಂದು ಎಡಬಟ್ಟು ಕಂಡು ಬಂದಿದೆ








