ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮತ್ತೊಂದು ಘನ ಘೋರವಾದಂತಹ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಯುವಕನೋರ್ವನನ್ನು ಕಿಡ್ನ್ಯಾಪ್ ಮಾಡಿ ಸಿಕ್ಕ ಸಿಕ್ಕಲ್ಲಿ ಬ್ಲೇಡ್ ಹಾಕಿ ಕೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ನಡೆದಿದೆ.
ಹೌದು ಮೆಹಿಳೆಯ ಜೊತೆ ಮಾತನಾಡಿದ್ದಕ್ಕೆ ಬೆತ್ತಲೆ ಗೊಳಿಸಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಈ ಒಂದು ಘನ ಘೋರ ಘಟನೆ ನಡೆದಿದೆ. ಪೊಲೀಸ್ ಠಾಣೆಯ ಕೂಗಳತೆಯಲ್ಲಿ ಈ ಒಂದು ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ಯುವಕನನ್ನು ಮುಜಾಫಿರ್ ಎಂದು ತಿಳಿದುಬಂದಿದೆ. ಮಹಿಳೆಯ ಸಂಬಂಧಿಕರು ಮುಜಾಫಿರ್ನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ.
ನಿನ್ನೆ ಮಹಿಳೆಯ ಜೊತೆ ಮುಜಾಫಿರ್ ಫೋನಿನಲ್ಲಿ ಮಾತನಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿದು ಮುಜಾಫಿರ್ನನ್ನು ಅಪಹರಿಸಿ ಹಲ್ಲೆ ಮಾಡಿದ್ದಾರೆ. ಮಹಿಳೆಯ ಸಮಾಬಂಧಿಕರು ಮುಜಾಫಿರ್ ನನ್ನು ಅಪಹರಿಸಿ ಸಿಕ್ಕಸಿಕ್ಕಲ್ಲಿ ಬ್ಲೇಡ್ ಹಾಕಿದ್ದಾರೆ. ಹಲ್ಲೆಯ ಬಳಿಕ ಆತನನ್ನು ಮನೆಯ ಬಳಿ ಬಿಟ್ಟು ಹೋಗಿದ್ದಾರೆ. ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.