ಹುಬ್ಬಳ್ಳಿ : ಎರಡು ಎಕರೆ ಜಮೀನು ಆಸ್ತಿ ಗಾಗಿ ತಂದೆ ಹಾಗೂ ಮಲತಾಯಿಯನ್ನು ರಾಡ್ ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದ ಘಟನೆ ನಿನ್ನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ಗಂಗಾಧರಪ್ಪ ಎನ್ನುವವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಗಂಗಾಧರಪ್ಪನನ್ನು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಿನ್ನೆ ಈ ಒಂದು ಘಟನೆ ನಡೆದಿತ್ತು. ಎರಡು ಎಕೆರೆ ಜಮೀನಿನ ವಿಚಾರವಾಗಿ ಅಪ್ಪ-ಮಗನ ನಡುವೆ ಗಲಾಟೆ ನಡೆದಿತ್ತು. ಆಸ್ತಿ ಬರೆದುಕೊಡಲು ನಿರಾಕರಿಸಿದಕ್ಕೆ ಪಾಪಿ ಮಗ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದ.
ತಂದೆ ಅಶೋಕಪ್ಪ ಹಾಗೂ ಮಲತಾಯಿ ಶಾರದಮ್ಮನನ್ನು ಆರೋಪಿ ಗಂಗಾಧರಪ್ಪ ಕೊಲೆ ಮಾಡಿದ್ದ. ಮನೆಯಲ್ಲಿ ಇಬ್ಬರನ್ನು ಕೊಲೆ ಮಾಡಿ ಗಂಗಾಧರಪ್ಪ ಪರಾರಿಯಾಗಿದ್ದ.ಇದೀಗ ಗಂಗಾಧರಪ್ಪನನ್ನು ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.