ಹುಬ್ಬಳ್ಳಿ : ಕಳೆದ ಕೆಲವು ತಿಂಗಳುಗಳ ಹಿಂದೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ್ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಡೀ ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಇದೀಗ ನೇಹಾಳಂತೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಬಾಲಕಿಯ ಮೇಲೆ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು ಅಪ್ರಾಪ್ತ ಬಾಲಕಿಯು ಶಾಲೆಗೆ ಹೋಗುವಾಗ ಆರೋಪಿ ಅಬ್ಬಾಸ್ ಸ್ನೇಹ ಮಾಡಿಕೊಂಡಿದ್ದಾನೆ. ನಂತರ ಕೆಲ ಬಾರಿ ಗಾರ್ಡನ್ಗೂ ಕರೆದುಕೊಂಡು ಹೋಗಿದ್ದಾನೆ. ಜೂನ್ 22 ರಂದು ಶಾಲೆಯಿಂದ ಮನೆಗೆ ಬಿಡುವುದಾಗಿ ಹೇಳಿ ರೇವಡಿಹಾಳ ಬ್ರಿಡ್ಜ್ ಹತ್ತಿರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಾಸಿದ್ದಾನೆ ಎಂದು ಬಾಲಕಿಯ ಪೋಷಕರು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಆಗಸ್ಟ್ 18ರಂದು ಬಾಲಕಿ ಮನೆ ಬಳಿ ಬಂದು ಅಬ್ಬಾಸ್ ಗಲಾಟೆ ಮಾಡಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಎಳೆದಾಡಿದ್ದಾನೆ. ಈ ವೇಳೆ ಬಾಲಕಿ ಪೋಷಕರಿಗೆ ಬೆದರಿಕೆ ಹಾಕಿದ್ದಾನೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ಅಬ್ಬಾಸ್ ನ ವಿರುದ್ದ ಸೆಕ್ಷನ್ 363, 376, 511, ಐಪಿಸಿ ಯೂ/ಎಸ್ 74, 329 (4), 351(3) ಹಾಗೂ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.