ಹುಬ್ಬಳ್ಳಿ : ಅಣ್ಣ ತಮ್ಮನ ಜಗಳ ಬಿಡಿಸಲು ಬಂದಿದ್ದ ತಾಯಿಯನ್ನು ಪಾಪಿ ಮಗನೋಬ್ಬ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ತೊರವಿಹಕ್ಕಲ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಪದ್ಮ (46) ಎಂದು ತಿಳಿದುಬಂದಿದೆ.
ಮಂಜುನಾಥ್ ಮತ್ತು ಲಕ್ಷ್ಮಣ ಎನ್ನುವ ಸಹೋದರರು ಕಟಿಂಗ್ ಶಾಪ್ ಇಟ್ಕೊಂಡು ಜೀವನ ನಡೆಸುತ್ತಿದ್ದರು. ಕಟಿಂಗ್ ಮಾಡಿದ ಹಣ ಹಂಚಿಕೆ ವಿಚಾರದಲ್ಲಿ ಇಬ್ಬರ ಸಹೋದರರ ನಡುವೆ ಜಗಳ ನಡೆದಿದೆ. ಸಹೋದರರಾದ ಮಂಜುನಾಥ್ ಮತ್ತು ಲಕ್ಷ್ಮಣ ನಡುವೆ ಹಣದ ವಿಚಾರವಾಗಿ ಗಲಾಟೆ ನಡೆದಿದೆ. ಜಗಳ ಬಿಡಿಸಲು ಬಂದಿದ್ದ ತಾಯಿಯ ಹೊಟ್ಟೆಗೆ ಮಂಜುನಾಥ್ ಕಿಟಕಿ ಗಾಜಿನಿಂದ ಇರಿದಿದ್ದಾನೆ.
ತಾಯಿ ಪದ್ಮ ಹೊಟ್ಟೆಗೆ ಮಂಜುನಾಥ ಕಿಟಕಿಯ ಗಾಜಿನಿಂದ ಇರಿದಿದ್ದಾನೆ. ತಕ್ಷಣ ಪದ್ಮಾವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಿಸದೆ ನರಳಾಡಿ ಪದ್ಮ ಚಲೂರಿ ಸಾವನಪ್ಪಿದ್ದಾರೆ. ಸದ್ಯ ಅವರ ಮಕ್ಕಳಾದ ಮಂಜುನಾಥ್ ಮತ್ತು ಲಕ್ಷ್ಮಣನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








