ಹುಬ್ಬಳ್ಳಿ : ಇತ್ತೀಚೆಗೆ ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಅನ್ನೋದಂತೆ ಲೈಂಗಿಕ ಪ್ರಕರಣಗಳು, ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರಿಂದ ಜನ ಭಯಭೀತರಾಗಿದ್ದಾರೆ. ಇದರ ಮಧ್ಯ ಹುಬ್ಬಳ್ಳಿಯಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು 15 ವರ್ಷದ ಬಾಲಕನ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.
ಹೌದು 15 ವರ್ಷದ ಬಾಲಕನ ಮೇಲೆ ಯುವಕನಿಂದ ಅತ್ಯಾಚಾರ ನಡೆದಿರುವ ಘಟನೆ ಹುಬ್ಬಳ್ಳಿಯ ಕಸಬಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಸುಮ್ ಹುಲಮನಿ ಎಂಬ ಯುವಕನಿಂದ ಈ ಒಂದು ದುಷ್ಕೃತ್ಯ ನಡೆದಿದೆ.ಗಾರೆ ಮತ್ತು ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮಾಸುಮ್ ಮೊಬೈಲ್ ಕೊಡಿಸುವುದಾಗಿ ಬಾಲಕನನ್ನು ಕರೆದೋಯ್ದು ದುಷ್ಕೃತ್ಯ ಎಸೆಗಿದ್ದಾನೆ.ಇದೀಗ ಪೊಲೀಸರು ಆರೋಪಿ ಮಾಸುಮ್ ಹುಲಮನಿಯನ್ನು ವಶಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿಯ ಕಸಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.