ಧಾರವಾಡ : ಧಾರವಾಡದಲ್ಲಿ ಗ್ಯಾಸ್ ಲೀಕ್ ಆಗಿ ಮನೆ ಒಂದು ಹೊತ್ತಿ ಉರಿದು ಛಿದ್ರ ಛಿದ್ರವಾಗಿರುವ ಘಟನೆ ಧಾರವಾಡ ತಾಲೂಕಿನಲ್ಲಿ ಈ ಒಂದು ಘಟನೆ ನಡೆದಿದೆ. ಸಿದ್ದವ ದಾನಪ್ಪ ನವರಿಗೆ ಸೇರಿದ ಮನೆ ಗ್ಯಾಸ್ ಲೀಕ್ ನಿಂದ ಮನೆ ಸ್ಫೋಟಗೊಂಡಿದೆ.
ಈ ವೇಳೆ ಮನೆಯವರು ಎಲ್ಲರೂ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಮನೆಯಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.ಅಗ್ನಿಶಾಮಕದಳ ಕೂಡಲೇ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.