ದಾವಣಗೆರೆ : ಮನೆಯಲ್ಲಿ ಗ್ಯಾಸ್ ಲೀಕ್ ಆಗಿ ಸಿಲಿಂಡರ್ ಸ್ಪೋಟಗೊಂಡು ಇಡೀ ಮನೆ ಹೊತ್ತಿ ಉರಿದಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಚೆನ್ನೇಶಪುರ ಎಂಬ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ ಅದೃಷ್ಟವಶಾತ್ ಮನೆಯಲ್ಲಿದ್ದ ತಾಯಿ ಹಾಗೂ ಮಗ ಮನೆಯಿಂದ ಹೊರಗೋಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಗ್ರಾಮದ ರೈತ ಕಾಶಪ್ಪ ಎಂಬುವರ ಮನೆ ಹೊತ್ತಿ ಉರಿದಿದೆ. ಮನೆಯಲ್ಲಿ ತಾಯಿ ಮಗ ಇಬ್ಬರೇ ವಾಸವಾಗಿದ್ದರು. ಅಡುಗೆ ಮನೆಯಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು, ಇದನ್ನ ನೋಡಿ ತಾಯಿ ಮಗ ಹೊರಗೆ ಓಡಿ ಬಂದಿದ್ದಾರೆ. ಇವರು ಹೊರ ಹೋದ ಎರಡು ನಿಮಿಷದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.
ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಓಡಿ ಹೋಗಿ ತಾಯಿ ಮಗ ಪ್ರಾಣ ಉಳಿಸಿಕೊಂಡಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಇಡೀ ಗ್ರಾಮವೇ ಬೆಸ್ಟ್ ಬಿದ್ದಿದೆ. ಸಿಲಿಂಡರ್ ಸ್ಫೋಟಕ್ಕೆ ಇಡೀ ಮನೆ ಸಂಪೂರ್ಣವಾಗಿ ಸುಟ್ಟು ಕರ್ಕಲಾಗಿದ್ದು ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.