ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ಅಕ್ರಮದ ವಿಡಿಯೋ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸ ಅಧಿಕಾರಕ್ಕೆ ಗೃಹ ಸಚಿವ ಜಿ ಪರಮೇಶ್ವರಿ ಸಭೆ ನಡೆಸಿದ್ದು ಸಭೆಯಲ್ಲಿ ಜೈಲು ಅಧಿಕಾರಿಗಳಿಗೆ ಗೃಹ ಸಚಿವ ಪರಮೇಶ್ವರ ಅವರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೌದು ಗೃಹ ಸಚಿವ ಪರಮೇಶ್ವರ ಜೊತೆ ಜೈಲಾಧಿಕಾರಿಗಳ ಸಭೆ ನಡೆಯುತ್ತಿದ್ದು, ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿ ವಿಡಿಯೋ ಬಗ್ಗೆ ತರಾಟೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳಿಗೆ ಪರಮೇಶ್ವರ್ ಅವರು ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಡಿಯೋ ಫೋಟೋಗಳನ್ನು ತೋರಿಸಿ ಪರಮೇಶ್ವರ್ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರಾಜೆಕ್ಟ್ ನಲ್ಲಿ ಪ್ರದರ್ಶಿಸಿ ಸಚಿವರು ವಿವರಣೆ ಕೇಳಿದ್ದಾರೆ ಎಲ್ಲಾ ಫೋಟೋ ವಿಡಿಯೋಗಳನ್ನು ತೋರಿಸಿ ಪ್ರಶ್ನೆ ಕೇಳಿದ್ದಾರೆ ಜೈಲು ಅಧಿಕಾರಿಗಳು ಎದ್ದುನಿಂತು ಗೃಹ ಸಚಿವರಿಗೆ ಉತ್ತರ ನೀಡಿದ್ದಾರೆ ಯಾವ್ಯಾವ ಫೋಟೋ ಯಾವಾಗ ತೆಗೆದಿರುವುದು ಎಂಬುದರ ಕುರಿತು ಎಲ್ಲಾ ಮಾಹಿತಿಯನ್ನು ಗೃಹ ಸಚಿವ ಪರಮೇಶ್ವರ್ ಸಂಗ್ರಹಿಸುತ್ತಿದ್ದಾರೆ. ಬೆಂಗಳೂರಿನ ಕಾರಾಗೃಹ ಕಚೇರಿಯಲ್ಲಿ ಈ ಒಂದು ಮಹತ್ವದ ಸಭೆ ನಡೆಯುತ್ತಿದೆ.








