ಬೆಂಗಳೂರು : ದೊಡ್ಡಬಳ್ಳಾಪುರದಲ್ಲಿ ಘೋರ ಘಟನೆ ನಡೆದಿದ್ದು, ಒಣಗಲು ಹಾಕಲಾಗಿದ್ದ ಬಟ್ಟೆಯನ್ನ ತೆಗೆಯಲು ಹೋದ ತಾಯಿ ಹಾಗೂ ತಾಯಿಯನ್ನ ಉಳಿಸಲು ಹೋದ ಮಗನಿಗೂ ವಿದ್ಯುತ್ ಸ್ವರ್ಶಿಸಿ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ತಾಯಿ ಮತ್ತು ಅಣ್ಣನನ್ನ ರಕ್ಷಿಸಲು ಮುಂದಾಗ ತಂಗಿಗೂ ವಿದ್ಯುತ್ ತಗುಲಿದೆ. ವಿದ್ಯುತ್ ಅವಘಡದಲ್ಲಿ ತಾಯಿ – ಮಗ ದುರಂತ ಸಾವನ್ನಪ್ಪಿದ್ದು, ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾರನಾಳ ಗ್ರಾಮದಲ್ಲಿ ಇಂದು ರಾತ್ರಿ ಘಟನೆ ನಡೆದಿದ್ದು, ವಿದ್ಯುತ್ ಅವಘಡದಲ್ಲಿ ತಾಯಿ ಲಲಿತಮ್ಮ (55), ಮಗ ಸಂಜಯ್ (35) ಸಾವನ್ನಪ್ಪಿದ್ದಾರೆ. ವಿದ್ಯುತ್ ಸ್ವರ್ಶದಿಂದ ಸುಟ್ಟಗಾಯಕ್ಕೆ ತುತ್ತಾಗಿರುವ ಮಗಳು ಲಕ್ಷ್ಮೀದೇವಿ(32)ಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.