ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಳವಳ್ಳಿಯಲ್ಲಿ ನಡೆದಿದೆ. ಶ್ರೀಕಾಂತ್ ಹೆಬ್ಬಾರ್ ಪುತ್ರಿ ಸಾಧ್ವಿ (2) ಗೊಬ್ಬರದ ಗುಂಡಿಗೆ ಬಿದ್ದು ಸಾವನಪ್ಪಿದ್ದಾಳೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಳವಳ್ಳಿ ಎಂಬ ಗ್ರಾಮದಲ್ಲಿ ಈ ಒಂದು ದುರ್ಘಟನೆ ನಡೆದಿದೆ. ತಂದೆ ಜೊತೆಗೆ 2 ವರ್ಷದ ಮಗು ಸಾದ್ವಿ ದನದ ಕೊಟ್ಟಿಗೆ ಬಳಿ ತೆರಳಿದ್ದಳು. ಈ ವೇಳೆ ತಂದೆ ಶ್ರೀಕಾಂತ್ ಕೊಟ್ಟಿಗೆ ಕೆಲಸದಲ್ಲಿ ಮಗ್ನರಾಗಿದ್ದಾಗ, ಗೊಬ್ಬರದ ಗುಂಡಿಯಲ್ಲಿ ಎರಡು ವರ್ಷದ ಮಗು ಬಿದ್ದು ಸಾವನ್ನಪ್ಪಿದ್ದಾಳೆ ತಕ್ಷಣ ಸಾದ್ವಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಳು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.