ಉಡುಪಿ : ಉಡುಪಿಯಲ್ಲಿ ಘೋರವಾದ ದುರಂತ ನಡೆದಿದ್ದು, ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಲೇಬರ್ ಕಾಲೋನಿಯ ಜೋಪಡಿಯಲ್ಲಿ ನಡೆದಿದೆ.
ಮಲ್ಲೇಶ್ (23) ಹಾಗು ಪವಿತ್ರಾ (17) ನೇಣಿಗೆ ಶರಣಾಗಿರುವ ಪ್ರೇಮಿಗಳು ಎಂದು ತಿಳಿದುಬಂದಿದೆ. ಮೃತ ಪವಿತ್ರಾ ತಾಯಿ ಮನೆಯಲ್ಲಿ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.