ಮಂಡ್ಯ : ಮಂಡ್ಯದಲ್ಲಿ ಇಂದು ಘೋರವಾದ ದುರಂತ ಒಂದು ನಡೆದಿದ್ದು, ವಿದ್ಯುತ್ ಕಂಬವನ್ನು ಅಳವಡಿಸುವ ವೇಳೆ ತಲೆಯ ಮೇಲೆ ವಿದ್ಯುತ್ ಕಂಬ ಮುರಿದುಬಿದ್ದು ಲೈನ್ ಮ್ಯಾನ್ ಒಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಸಹಳ್ಳಿಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ಮಳವಳ್ಳಿ ತಾಲೂಕಿನ ಹಲಸ ಹಳ್ಳಿಯಲ್ಲಿ ಇಂದು ವಿದ್ಯುತ್ ಕಂಬವನ್ನು ಅಳವಡಿಸಲಾಗುತ್ತಿತ್ತು. ವಿದ್ಯುತ್ ಕಂಬ ಅಳವಡಿಸುವ ವೇಳೆ ಕಂಬ ಏಕಾಏಕಿ ಮುರಿದುಬಿದ್ದಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಕುಲುಮೆ ದೊಡ್ಡಿ ಗ್ರಾಮದ ಕುಮಾರ್ (31) ಸಾವನ್ನಪ್ಪಿದ್ದಾರೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.