ಮಧ್ಯಾಪ್ರದೇಶ : ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಕಳಶಯಾತ್ರೆಯಲ್ಲಿ ಭೀಕರ ಕಾಲ್ತುಳಿತ ನಡೆದಿದೆ ಈ ಒಂದು ಘಟನೆಯಲ್ಲಿ ಓರ್ವ ಭಕ್ತ ಸಾವನ್ನಪ್ಪಿದು ಹಲವರಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಗ್ವಾಲಿಯರ್‌ನ ದಾಬ್ರಾದಲ್ಲಿ ಮಂಗಳವಾರ ನಡೆದ ನವಗ್ರಹ ಪೀಠ ಕಲಾಶ್ ಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಜಿ ಗೃಹ ಸಚಿವ ನರೋತ್ತಮ್ ಮಿಶ್ರಾ ಆಯೋಜಿಸಿದ್ದ ಈ ಕಾರ್ಯಕ್ರಮವು ಭಾರಿ ಜನಸಮೂಹವನ್ನು ಸೇರಿದ್ದು ಘಟನೆ ಕುರಿತು ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.








