ಕಲಬುರ್ಗಿ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು ಸರ್ಕಾರಿ ಬಸ್ ಹಾಗೂ ಜೀಪ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದರೆ. ಇನ್ನು ಮೂವರಿಗೆ ಗಂಭೀರವಾದ ಗಾಯಗಳಾಗಿವೆ.
ಕಲ್ಬುರ್ಗಿ ಸಂಚಾರಿ ಪೊಲೀಸ್ ಠಾಣೆ ಒಂದರ ವ್ಯಾಪ್ತಿಯಲ್ಲಿ ಈ ಒಂದು ಸರಣಿ ಅಪಘಾತ ಸಂಭವಿಸಿದೆ ಸಾರಿಗೆ ಬಸ್ಗೆ ಕಮಾಂಡರ್ ಜೀಪ್ ಡಿಕ್ಕಿ ಆಗಿದೆ ನಿಂತಿದ್ದ ಸಾರಿಗೆ ಬಸ್ಗೆ ಇನ್ನೊಂದು ಬಸ್ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಜೀಪ್ನಲ್ಲಿ ಇದ್ದಂತಹ ಓರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಧ್ಯೆ ಇಬ್ಬರು ಸಾವನ್ನಪ್ಪಿದ್ದರೆ. ಗಾಯಗೊಂಡ ಉಳಿದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








