ಶಿರಾಳಕೊಪ್ಪ ಬಳಿ ಬೆಳಗಿಯಲ್ಲಿ ಅಂಗನವಾಡಿ ಸಹಾಯಕಿಯ ಭೀಕರವಾಗಿ ಕೊಲೆ ಮಾಡಲಾಗಿದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದಲ್ಲಿ ಈ ಒಂದು ಬರ್ಬರ ಕೊಲೆ ನಡೆದಿದೆ. ನಿನ್ನೆ ರಾತ್ರಿ ಪ್ರೇಮ (52) ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೊಲೆಯಾದ ಪ್ರೇಮಾ ನಾಲ್ವರು ಮಕ್ಕಳ ಜೊತೆಗೆ ವಾಸವಿದ್ದರು. ಮೂವರು ಹೆಣ್ಣು ಮಕ್ಕಳ ಹಾಗೂ ಓರ್ವ ಮಗನ ಜೊತೆಗೆ ಪ್ರೇಮ ವಾಸವಿದ್ದರು. ಘಟನೆ ಸಂಭಂದ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








