ಮಂಡ್ಯ : ಮಂಡ್ಯದಲ್ಲಿ ಯುವಕನ ಭೀಕರ ಕೊಲೆಯಾಗಿದ್ದು, ರಾಮಂದೂರಿನಲ್ಲಿ ಅಪ್ರಾಪ್ತೆಯನ್ನು ಪ್ರೀತಿಸಿದ್ದಕ್ಕೆ ಯುವಕನ ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಮಂದೂರು ಗ್ರಾಮದಲ್ಲಿ ಯುವಕನು ಕೊಂದು ಅಪಘಾತ ಎಂದು ಬಿಂಬಿಸಿದ್ದಾಗಿ ಪೋಷಕರು ಆರೋಪಿಸಿದ್ದಾರೆ ರಾಮಂದೂರು ಕೆರೆಯ ಬಳಿ ಕಲ್ಕುಣಿ ನಿವಾಸಿ ಮಂಜು (21) ಶವ ಸಿಕ್ಕಿತ್ತು. ರಾಮಂದೂರಿನ ಕೆರೆಯಲ್ಲಿ ಮೀನು ಹಿಡಿಯಲು ಮಂಜು ಬಂದಿದ್ದ. ಈ ವೇಳೆ ಕೆರೆಯ ಪಕ್ಕದ ಹಳ್ಳದಲ್ಲಿ ಮಂಜು ಶವ ಪತ್ತೆಯಾಗಿತ್ತು.
ಆಟೋ ಪಲ್ಟಿಯಾಗಿ ಮೃತಪಟ್ಟಂತೆ ಮಂಜು ಮೃತ ದೇಹ ಮತ್ತೆಯಾಗಿದೆ ಮಂಜುನನ್ನು ಕೊಂದು ಆಟೋದಲ್ಲಿ ಶವ ಬಿಟ್ಟು ಹಳ್ಳಕ್ಕೆ ದೂಡಿರುವ ಶಂಕೆ ವ್ಯಕ್ತವಾಗಿದೆ ಮಂಜು ಸಾವಿನ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸರಲ್ಲೂ ಕೂಡ ಅನುಮಾನ ವ್ಯಕ್ತವಾಗಿದೆ ಮಂಜುವನ್ನು ಕೊಲೆಗೈದಿದ್ದಾರೆ ಎಂದು ಪೋಷಕರು ಆರೋಪಿಸಿದ್ದು ಮಂಜು ಪ್ರೀತಿಸುತ್ತಿದ್ದ ಅಪ್ರಾಪ್ತೇ ಸಂಬಂಧಿಕರಿಂದ ಕೊಲೆ ಆರೋಪ ಕೇಳಿ ಬಂದಿದೆ. ಎರಡು ವರ್ಷದಿಂದ ಮಂಜು ಸಂಬಂಧಿಕರ ಪುತ್ರಿ ಯನ್ನು ಪ್ರೀತಿಸುತ್ತಿದ್ದ.
ಆಕೆಯು ಮಂಜುನಾಥ್ ಮದುವೆಯಾಗುವುದಾಗಿ ಹೇಳುತ್ತಿದ್ದಳು 18 ವರ್ಷ ತುಂಬಿದ ನಂತರ ಮದುವೆಯಾಗಲು ನಿರ್ಧರಿಸಿದ್ದರು ಮಂಜು ಅಜ್ಜಿ ಮನೆಯಲ್ಲಿಯೇ ಮಂಜು ಪ್ರೇಯಸಿ ಉಳಿದುಕೊಂಡಿದ್ದಳು. ಇದೇ ಕಾರಣಕ್ಕೆ ಮಂಜುನನ್ನು ಕೊಂದಿದ್ದಾರೆ ಎಂದು ಮಂಜುವಿನ ಪೋಷಕರು ಆರೋಪಿಸಿದ್ದಾರೆ ಬಾಲಕಿ ಕುಟುಂಬ ಸದಸ್ಯರು ಮಂಜು ಕೊಂದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.